ಹಾಸನ: ಅಕ್ರಮ ಮತದಾನದ ದೂರು ನೀಡಿದ್ದ ಬಿಜೆಪಿ ಏಜೆಂಟ್‌ ವಿರುದ್ಧ ಎಫ್‌ಐಆರ್‌

ಸೋಮವಾರ, ಮೇ 27, 2019
33 °C

ಹಾಸನ: ಅಕ್ರಮ ಮತದಾನದ ದೂರು ನೀಡಿದ್ದ ಬಿಜೆಪಿ ಏಜೆಂಟ್‌ ವಿರುದ್ಧ ಎಫ್‌ಐಆರ್‌

Published:
Updated:

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಎರಡು ಮತಗಟ್ಟೆಗಳಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ದೂರು ನೀಡಿದ್ದ ಬಿಜೆಪಿ ಬೂತ್‌ ಏಜೆಂಟ್‌ ಮಾಯಣ್ಣ ವಿರುದ್ಧವೇ ಎಫ್‌ಐಆರ್‌ ದಾಖಲಾಗಿದೆ.

ಸಂಸದ ಎಚ್.ಡಿ.ದೇವೇಗೌಡ ಅವರು ಮತ ಚಲಾಯಿಸಿದ್ದ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಬಿಜೆಪಿ ಏಜೆಂಟ್‌ ಆಗಿದ್ದ ಮಾಯಣ್ಣ ಅವರು ಮತಗಟ್ಟೆ ಸಂಖ್ಯೆ 200 ಹಾಗೂ 277 ರಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಚುನಾವಣಾಧಿಕಾರಿಗೆ ದೂರು ನೀಡಿದ್ದರು.

ಈ ಸಂಬಂಧ ಪರಿಶೀಲನೆ ನಡೆಸಿದ್ದ ಚುನಾವಣಾ ಹಾಗೂ ಪೊಲೀಸ್‌ ಅಧಿಕಾರಿಗಳು ಮಾಯಣ್ಣ ಅವರ ಆರೋಪದಲ್ಲಿ ಹುರುಳಿಲ್ಲ. ಸಾರ್ವಜನಿಕರ ದಾರಿ ತಪ್ಪಿಸುವ ಉದ್ದೇಶದಿಂದ ಸುಳ್ಳು ದೂರು ನೀಡಿದ್ದಾರೆಂದು ತಿಳಿಸಿದ್ದಾರೆ. ಹಾಗಾಗಿ ಸೆಕ್ಟರ್‌ ಅಧಿಕಾರಿ ದೇವರಾಜು ಅವರು ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪಡುವಲಹಿಪ್ಪೆ ಮತಗಟ್ಟೆ ಸಂಖ್ಯೆ 244ರಲ್ಲಿ ಸಚಿವ ಎಚ್‌.ಡಿ.ರೇವಣ್ಣ ಅಕ್ರಮ ಮತದಾನ ಮಾಡಿಸಿದ್ದಾರೆ ಎಂದು ಆರೋಪಿಸಿ ಏ. 24ರಂದು ಬೂತ್‌ನ ಬಿಜೆಪಿ ಏಜೆಂಟ್‌ರಾಗಿದ್ದ ಮಾಯಣ್ಣ ಹಾಗೂ ಕೆ.ಎನ್‌.ರಾಜು ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಚೇತನ್‌ ಸಿಂಗ್‌ ರಾಥೋರ್‌ ಗೆ ದೂರು ಸಲ್ಲಿಸಿದ್ದರು.

ಅಲ್ಲದೇ ಹೊಳೆನರಸೀಪುರ ತಾಲ್ಲೂಕಿನ 20ಕ್ಕೂ ಅಧಿಕ ಕೇಂದ್ರಗಳಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಆರೋಪ ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿ, ಮತಗಟ್ಟೆ ಅಧಿಕಾರಿ ಹಾಗೂ ಇಬ್ಬರು ಸಹಾಯಕ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !