ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ರೈಲ್ವೆ ಹಳಿಯ ಬಳಿ ಬಾಲಕನ ಶವ ಪತ್ತೆ: ಕೊಲೆ ಮಾಡಿ ಎಸೆದಿರುವ ಶಂಕೆ

Published 10 ಜುಲೈ 2024, 14:47 IST
Last Updated 10 ಜುಲೈ 2024, 14:47 IST
ಅಕ್ಷರ ಗಾತ್ರ

ಹಾಸನ: ಮಂಗಳವಾರ ನಾಪತ್ತೆಯಾಗಿದ್ದ ಬಾಲಕನ ಶವ, ಬುಧವಾರ ನಗರದ ಹೊರವಲಯದ ಎಚ್‌ಪಿಸಿಎಲ್ ಹಿಂಭಾಗದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.

ಚಿಕ್ಕಹೊನ್ನೇನಹಳ್ಳಿ ಗ್ರಾಮದ ವೆಂಕಟೇಶ್ ಹಾಗೂ ರೂಪಾ ದಂಪತಿ ಪುತ್ರ ಕುಶಾಲ್‌ಗೌಡ (11) ಮೃತ ಬಾಲಕ. ಬಾಲಕನನ್ನು ಕೊಲೆ ಮಾಡಿ ನಂತರ ರೈಲ್ವೆ ಹಳಿಯ ಬಳಿ ಬಿಸಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಗ್ರಾಮದಲ್ಲಿ ಶಾಲೆ ಮುಗಿಸಿ ಬಂದ ಬಳಿಕ, ಕಣ್ಣ ಮುಚ್ಚಾಲೆ ಆಡುತ್ತಿದ್ದ ವೇಳೆ ಬಚ್ಚಿಟ್ಟುಕೊಳ್ಳಲು ಹೋದ ಕುಶಾಲ್‌ಗೌಡ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದ. ಚಿರತೆ ಎಳೆದೊಯ್ದಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದರು. ಗ್ರಾಮಸ್ಥರು, ಪೋಷಕರು, ಸಂಬಂಧಿಕರು ರಾತ್ರಿ ಹುಡುಕಾಟ ನಡೆಸಿದರೂ ಬಾಲಕನ ಸುಳಿವು ಸಿಕ್ಕಿರಲಿಲ್ಲ.

ಬಾಲಕನನ್ನು ಮೊದಲು ಕೊಲೆ ಮಾಡಿ, ನಂತರ ರೈಲ್ವೆ ಹಳಿಯ ಮೇಲೆ ಎಸೆದಿದ್ದು, ಅಪಘಾತ ಅಥವಾ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ವಿಷಯ ತಿಳಿದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ತಮ್ಮ ಮಗ ಶವವಾಗಿರುವುದನ್ನು ಕಂಡ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT