ಶನಿವಾರ, ಏಪ್ರಿಲ್ 1, 2023
25 °C

ಮುಂದುವರಿದ ಸೋನೆ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಹಾಸನ: ಜಿಲ್ಲೆಯ ವಿವಿಧೆಡೆ ಭಾನುವಾರ ಜಿಟಿಜಿಟಿ ಮಳೆಯಾಗಿದೆ. ಹಾಸನ ನಗರದಲ್ಲಿ ಬೆಳಿಗ್ಗೆ ಎರಡು ತಾಸು
ಬಿರುಸಿನ ಮಳೆಯಾಗಿ, ಮಧ್ಯಾಹ್ನ ನಂತರ ತುಂತುರು ಮಳೆಯಾಯಿತು.

ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಹಾಸನ, ಸಕಲೇಶಪುರ, ಹೆತ್ತೂರು, ಆಲೂರು, ಅರಕಲಗೂಡು
ಭಾಗದಲ್ಲಿ ಸೋನೆ ಮಳೆ ಮುಂದುವರಿದಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿದಿವೆ. ಪಶ್ಚಿಮಘಟಕ್ಕೆ ಹೊಂದಿಕೊಂಡಿರುವ ಪ್ರದೇಶಗಳಾದ ಕಾಗಿನಹರೆ, ಹೊಂಗಡಹಳ್ಳ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ.

ಸೋನೆ ಮಳೆ ಮುಂದುವರಿದಿರುವುದರಿಂದ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಗರದ ಎಪಿಎಂಸಿ ರಸ್ತೆ, ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ ರಸ್ತೆಗಳು ಕೆಸರುಮಯವಾಗಿವೆ. ಜನರು , ವಾಹನ ಸವಾರರಿಗೆ ತೊಂದರೆ ಆಗಿದೆ.

ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಆಗಿರುವುದರಿಂದ ಜಲಾಶಯಗಳ ಒಳ ಹರಿವು ಪ್ರಮಾಣ‌ ಮತ್ತಷ್ಟು  ಇಳಿಕೆಯಾಗಿದೆ. ಹೇಮಾವತಿ ಜಲಾಶಯದ ಒಳ ಹರಿವು 6751 ಕ್ಯುಸೆಕ್ ಗೆ ಇಳಿಕೆಯಾಗಿದೆ. ಜಲಾಶಯದ
ನೀರಿನ ಮಟ್ಟ 2903.88 ಅಡಿಗಳಿಷ್ಟಿದೆ. 

ಭಾನುವಾರ ಬೆಳಿಗ್ಗೆವರೆಗಿನ 24 ಗಂಟೆಯಲ್ಲಿ ದಾಖಲಾದ ಹೋಬಳಿವಾರು ಮಳೆ ವಿವರ: ಹಾಸನ ತಾಲ್ಲೂಕಿನ ಶಾಂತಿಗ್ರಾಮ 14.0 ಮಿ.ಮೀ, ಗೊರೂರು 23.1 ಮಿ.ಮೀ, ಕಟ್ಟಾಯ 19.8 ಮಿ.ಮೀ, ಸಾಲಗಾಮೆ
22.1 ಮಿ.ಮೀ, ಕಸಬಾ 34.8 ಮಿ.ಮೀ, ದುದ್ದ 9 ಮಿ.ಮೀ ಮಳೆಯಾಗಿದೆ.

ಬೇಲ್ಲೂರು ತಾಲ್ಲೂಕಿನ ಬೇಲೂರು 32.6 ಮಿ.ಮೀ, ಹಳೇಬೀಡು 27.2 ಮಿ.ಮೀ, ಹಗರೆ 27.2 ಮಿ.ಮೀ, ಬಿಕ್ಕೋಡು 20.4 ಮಿ.ಮೀ, ಗಾಡೇನಹಳ್ಳಿ 45 ಮಿ.ಮೀ, ಅರೇಹಳ್ಳಿ 31 ಮಿ.ಮೀ ಮಳೆ ಸುರಿದಿದೆ.      ಸಕಲೇಶಪುರ ತಾಲ್ಲೂಕಿನ ಹೆತ್ತೂರು 4 0.6 ಮಿ.ಮೀ, ಹಾನುಬಾಳು 42.4. ಮಿ.ಮೀ, ಸಕಲೇಶಪುರ 40.2
ಮಿ.ಮೀ, ಶುಕ್ರವಾರ ಸಂತೆ 36 ಮಿ.ಮೀ, ಬೆಳಗೋಡು 19.3 ಮಿ.ಮೀ, ಬಾಳುಪೇಟೆ 25.4 ಮಿ.ಮೀ, ಮಾರನಹಳ್ಳಿ 38.04 ಮಿ.ಮೀ, ಹೊಸೂರು 24.2 ಮಿ.ಮೀ, ಯಸಳೂರು 24 ಮಿ.ಮೀ ಮಳೆಯಾಗಿದೆ.
ಅರಸೀಕೆರೆ ತಾಲ್ಲೂಕಿನ ಗಂಡಸಿ 6.8 ಮಿ.ಮೀ, ಕಸಬಾ 7 ಮಿ.ಮೀ, ಜಾವಗಲ್‌ 7 ಮಿ.ಮೀ, ಬಾಣಾವಾರ 5 ಮಿ.ಮೀ, ಕಣಕಟ್ಟೆ 22.2 ಮಿ.ಮೀ ಹಾಗೂ ಆಲೂರು ತಾಲ್ಲೂಕಿನ ಆಲೂರು 13 ಮಿ.ಮೀ, ಪಾಳ್ಯ 16.8 ಮಿ.ಮೀ, ಕುಂದೂರು 15.6 ಮಿ.ಮೀ, ಕೆ.ಹೊಸಕೋಟೆ 21 ಮಿ.ಮೀ ಮಳೆಯಾಗಿದೆ.

ಅರಕಲಗೂಡು ತಾಲ್ಲೂಕಿನ ಕಸಬಾ 20 ಮಿ.ಮೀ, ದೊಡ್ಡಮಗ್ಗೆ 16.08 ಮಿ.ಮೀ, ರಾಮನಾಥಪುರ 15.3 ಮಿ.ಮೀ, ಬಸವಾಪಟ್ಟಣ 28.08 ಮಿ.ಮೀ, ಮಲ್ಲಿಪಟ್ಟಣ 15 ಮಿ.ಮೀ, ಕೊಣನೂರು 27 ಮಿ.ಮೀ, ದೊಡ್ಡಬೆಮ್ಮತ್ತಿ 25.4 ಮಿ.ಮೀ ಮಳೆ ಸುರಿದಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 3.2 ಮಿ.ಮೀ, ಉದಯಪುರ 3.2 ಮಿ.ಮೀ, ಬಾಗೂರು 15 ಮಿ.ಮೀ, ನುಗ್ಗೇಹಳ್ಳಿ 22.4 ಮಿ.ಮೀ, ಹಿರೀಸಾವೆ 32.2 ಮಿ.ಮೀ, ಶ್ರವಣಬೆಳಗೊಳ 23.1 ಮಿ.ಮೀ ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹೊಳೆನರಸೀಪುರ 15.2 ಮಿ.ಮೀ, ಹಳ್ಳಿಕೋಟೆ 22.3 ಮಿ.ಮೀ, ಹಳ್ಳಿ ಮೈಸೂರು 17.1 ಮಿ.ಮೀ ಮಳೆ ಸುರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು