ಶನಿವಾರ, ನವೆಂಬರ್ 23, 2019
23 °C

ಕಾಫಿ ತೋಟದಲ್ಲಿ ಜಿಂಕೆ ಸಾವು

Published:
Updated:
Prajavani

ಸಕಲೇಶಪುರ: ತಾಲ್ಲೂಕಿನ ಸುಂಡೇಕೆರೆ ಸಮೀಪದ ಕೆಲಗಳಲೆ ಗ್ರಾಮದ ಕಾಫಿ ತೋಟದಲ್ಲಿ ಭಾನುವಾರ ಗಂಡು ಜಿಂಕೆಯೊಂದು ಸತ್ತಿದೆ.

ಗ್ರಾಮದ ರಘು ಎಸ್ಟೇಟ್‌ನಲ್ಲಿ ಸುಮಾರು 6 ವರ್ಷದ ವಯಸ್ಸಿನ ಜಿಂಕೆ ಮೇಯುತ್ತಿದ್ದ ಸಂದರ್ಭದಲ್ಲಿ ಇಳಿಜಾರಿನಲ್ಲಿ ಜಾರಿ ಕೆಳಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಕಂಡು ಬಂದಿದೆ. ಸ್ಥಳಕ್ಕೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಜಿಂಕೆಯ ಶವಪರೀಕ್ಷೆ ನಡೆಸಿ ಅಂತಿಮ ಸಂಸ್ಕಾರ ಮಾಡಿದರು.

ಪ್ರತಿಕ್ರಿಯಿಸಿ (+)