ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣನೂರು| ವಿಶ್ವ ಪರಿಸರ ದಿನಾಚರಣೆ: ಉಚಿತ ಸಸಿಗಳ ವಿತರಣೆ

Published 4 ಜೂನ್ 2023, 13:36 IST
Last Updated 4 ಜೂನ್ 2023, 13:36 IST
ಅಕ್ಷರ ಗಾತ್ರ

ಕೊಣನೂರು: ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಾರ್ವಜನಿಕರಿಗೆ ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ವಿವಿಧ ಜಾತಿ ಸಸಿ ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ನಿರ್ವಾಹಕಿ ಬಿ.ಕೆ. ರೇಖಾ ಪ್ರಕೃತಿ ರಕ್ಷಣೆ ಹೊಣೆ ಎಲ್ಲರದ್ದಾಗಿದ್ದು ಪ್ರಕೃತಿಯನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಕೊರೊನಾ ಸಂದರ್ಭ ಆಮ್ಲಜನಕಕ್ಕೆ ಎಷ್ಟೊಂದು ಮಹತ್ವ ಇದೆ ಎಂಬ ಪಾಠವನ್ನು ಮಾನವ ಕುಲವು ಚೆನ್ನಾಗಿ ಮನಗಂಡಿತು. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಇಂದು ತೇಗ, ಕೂಳಿ, ಹಲಸು, ,ಮಾವು, ಮಹಾಗನಿ, ನೆಲ್ಲಿ, ಹೆಬ್ಬೇವು ಮುಂತಾದ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ’ ಎಂದರು.

ಅರಕಲಗೂಡು ಕೇಂದ್ರದ ಸಂಚಾಲಕಿ ಬಿ.ಕೆ. ಸುಷ್ಮಾ ಮಾತನಾಡಿ,‘ಪ್ರಕೃತಿ ಮತ್ತು ಮನುಷ್ಯತ್ವದ ನಡುವಿನ ಹೊಂದಾಣಿಕೆ ಹೆಚ್ಚಿಸಬೇಕಿದ್ದರೆ ಪ್ರಕೃತಿ ಕಾಪಾಡಬೇಕು’ ಎಂದರು.

ಮುಖಂಡ ಇಮ್ರಾನ್ ಮೊಕ್ತಾರ್, ನಂಜುಂಡೇಗೌಡ ಮಾತನಾಡಿದರು. ಗಣಪತಿಭಟ್, ಹಂಡ್ರಂಗಿಸುಬ್ಬೇಗೌಡ್ರು, ಸೂರ್ಯನಾರಾಯಣ್, ಅಮೃತೇಶ್, ಚಂದ್ರಣ್ಣ, ಸುನಿತಾ, ಹೊನ್ನೂರಬಿ , ನಾಗರತ್ನ , ಮಂಗಳ, ಸುರೇಶ, ಮೋಹನ, ಶಿವ , ರಾಧಾ, ಜತೀಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT