ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು: ತಾಯಿಯಿಂದ ಬೇರ್ಪಟ್ಟ ಮರಿಯಾನೆ ಸಾವು

Published 5 ಆಗಸ್ಟ್ 2023, 14:24 IST
Last Updated 5 ಆಗಸ್ಟ್ 2023, 14:24 IST
ಅಕ್ಷರ ಗಾತ್ರ

ಬೇಲೂರು: ತಾಯಿಯಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಮರಿಯಾನೆಯ ಶವ ತಾಲ್ಲೂಕಿನ ಕಾನಹಳ್ಳಿ ಅರಣ್ಯದಲ್ಲಿ ಶನಿವಾರ ಪತ್ತೆಯಾಗಿದೆ.

ಕಳೆದ ವಾರ ತಾಯಿ ಆನೆಯಿಂದ ಬೇರ್ಪಟ್ಟಿದ್ದ ಮರಿ ಆನೆಯನ್ನು ತಾಯಿಯ ಜೊತೆ ಸೇರಿಸಲು ಅರಣ್ಯ ಇಲಾಖೆಯವರು ಪ್ರಯತ್ನಿಸಿದ್ದು, ತಾಯಿ ಆನೆ ಸಮೀಪ ಬಿಟ್ಟಿದರು. ಆದರೆ ತಾಯಿ ಆನೆ ಮರಿ ಆನೆಯನ್ನು ಜೊತೆಗೆ ಸೇರಿಸಿಕೊಂಡಿರಲಿಲ್ಲ. ಶನಿವಾರ ಮರಿ ಆನೆ ಮೃತಪಟ್ಟಿದೆ.

‘ಮರಿ ಆನೆಯನ್ನು ತಾಯಿ ಆನೆ ಜೊತೆಗೆ ಸೇರಿಸಲು ಪ್ರಯತ್ನ ಪಟ್ಟಿದ್ದವು. ತಾಯಿ ಆನೆಯಾಗಲಿ ಅಥವಾ ಬೇರೆ ಆನೆಗಳ ಗುಂಪು ಈ ಮರಿ ಆನೆಯನ್ನು ಗುಂಪಿಗೆ ಸೇರಿಸಿಕೊಂಡಿರಲಿಲ್ಲ. ಎರಡು ದಿನದಿಂದ ಮರಿ ಆನೆ ಕಾಣಿಸುತ್ತಿರಲಿಲ್ಲ. ಹುಡುಕಾಟ ನಡೆಸಿದ್ದು, ಶನಿವಾರ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ಎಸಿಎಫ್‌ ಪ್ರಭು ಬಿರಾದಾರ ಸಮ್ಮುಖದಲ್ಲಿ ನಡೆಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT