ಬುಧವಾರ, ಆಗಸ್ಟ್ 10, 2022
21 °C

ಏರಿಯ ಮಣ್ಣು ತೆರವು ಕಾರ್ಯಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಣನೂರು: ಕಟ್ಟೇಪುರ ನಾಲೆಯ ಏರಿಗೆ ಮಣ್ಣು ತುಂಬಿದ್ದು, ನಾಲೆಗೆ ಮಣ್ಣು ಕುಸಿಯುತ್ತಿದ್ದ ಬಗ್ಗೆ ಶಾಸಕರು ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದ್ದರಿಂದ ಮಣ್ಣು ತೆಗೆಯುವ ಕಾರ್ಯ ಪ್ರಾರಂಭವಾಗಿದೆ.

ಪಟ್ಟಣದ ಈಡಿಗರ ಸಮುದಾಯ ಭವನದ ಸಮೀಪ ಖಾಸಗಿ ಸ್ಥಳದಲ್ಲಿ ವ್ಯಕ್ತಿಯೊಬ್ಬರು ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದು, ಅದರ ಪಕ್ಕದಲ್ಲಿ ಹರಿಯುತ್ತಿರುವ ಕಟ್ಟೇಪುರ ಎಡದಂಡಾ ನಾಲೆಯ 9 ಮೀಟರ್ ಸೇವಾ ರಸ್ತೆಗೆ ಮಣ್ಣು ತುಂಬಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ದೂರು ದಾಖಲಾಗಿತ್ತು.

ಕಾಲುವೆಯ ಏರಿಯ ಮೇಲೆ ಎತ್ತರಕ್ಕೆ ತುಂಬಿದ್ದ ಮಣ್ಣು ನೀರಿಗೆ ಬೀಳದಂತೆ ಸುಮಾರು 2 ಅಡಿ ಹಿಂದಕ್ಕೆ ತೆಗೆಯುವ ಕಾರ್ಯ ಪ್ರಾರಂಭವಾಗಿದೆ.
ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಕಾಲುವೆಗೆ ನೀರು ಹೋಗುವಂತೆ ಅಳವಡಿಸಿದ್ದ ಪೈಪ್‌ನ ಸಂಪರ್ಕ ಕಡಿತಗೊಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.