ಭದ್ರತಾ ಕೊಠಡಿಗಳಿಗೆ ಬೀಗಮುದ್ರೆ

ಸೋಮವಾರ, ಮೇ 27, 2019
29 °C
ಸ್ಟ್ರಾಂಗ್ ರೂಂ ಸೇರಿದ ಮತಪೆಟ್ಟಿಗೆ, ಸಿ.ಸಿ.ಟಿ.ವಿ ಕ್ಯಾಮೆರಾಗಳ ಕಣ್ಗಾವಲು

ಭದ್ರತಾ ಕೊಠಡಿಗಳಿಗೆ ಬೀಗಮುದ್ರೆ

Published:
Updated:
Prajavani

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದಲ್ಲಿ ಭದ್ರವಾಗಿ ಇರಿಸಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಚುನಾವಣಾ ವೀಕ್ಷಕರಾದ ಶಶಿಭೂಷಣ್ ಕುಮಾರ್ ಮತ್ತು ಮಂಜಿತ್ ಸಿಂಗ್ ಬ್ರಾರ್ ಸಮ್ಮುಖದಲ್ಲಿ ಎಲ್ಲಾ ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿರಿಸಿ ಬೀಗಮುದ್ರೆ ಹಾಕಲಾಯಿತು.

ಎಂಟು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಕಟ್ಟಡಕ್ಕೆ ವಿಶೇಷ ಭದ್ರತಾ ಪಡೆ, ಪೊಲೀಸ್ ತಂಡ ನಿಯೋಜಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸಹಾಯಕ ಚುನಾವಣಾಧಿಕಾರಿ ಎಂ.ಎಲ್. ವೈಶಾಲಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಹಾಗೂ ಎಂ.ಸಿ.ಸಿ ನೋಡಲ್ ಅಧಿಕಾರಿ ಪ್ರಿಯಾಂಗ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಉಪವಿಭಾಗಾಧಿಕಾರಿ ಕವಿತಾ ರಾಜಾ ರಾಮ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸವಿತಾ, ತಹಶೀಲ್ದಾರರಾದ ಮೇಘನಾ, ಶಿರಾನ್ ತಾಜ್ ಹಾಜರಿದ್ದರು.

ಶಾಂತಿಯುತ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸಲು ಸಹಕರಿಸಿದ ಚುನಾವಣಾ ವೀಕ್ಷಕರು, ಎಲ್ಲಾ ತಂಡಗಳ ಮುಖ್ಯಸ್ಥರು, ಅಧಿಕಾರಿ ಸಿಬ್ಬಂದಿ, ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಧನ್ಯವಾದ ಸಲ್ಲಿಸಿದರು.

‘ಶಾಂತಿಯುತ ಚುನಾವಣೆ ಹಾಗೂ ಮತದಾನ ಪ್ರಮಾಣ ಹೆಚ್ಚಾಗಲು ಸಹಕರಿಸಿದ ಸಮಿತಿ ಅಧಿಕಾರಿಗಳು, ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ’ ಎಂದು ಸ್ವೀಪ್‌ ಸಮಿತಿ ಅಧ್ಯಕ್ಷ ಕೆ.ಎನ್. ವಿಜಯ ಪ್ರಕಾಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !