ಸಕಲೇಶಪುರ: ಲಾರಿ, ಕಾರು, ಟೆಂಪೋ ಟ್ರ್ಯಾಕ್ಸ್ ಸೇರಿದಂತೆ ಚಾಲಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಸಹಾಯಕ ಸಾರಿಗೆ ಇಲಾಖೆ ಮಾಹಿತಿ ನೀಡುವಂತೆ ಕುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಕಾರ್ಯಕರ್ತರು ಮನವಿ ಮಾಡಿದರು.

ಮೋಟಾರು ವೆಹಿಕಲ್ ಇನ್‌ಸ್ಪೆಕ್ಟರ್ ಆಗಿ ಸರ್ಕಾರದಿಂದ ನೇಮಕಗೊಂಡು ಮೊದಲ ಬಾರಿಗೆ ಇಲ್ಲಿಯ ಸಹಾಯಕ ಸಾರಿಗೆ ಇಲಾಖೆಯಲ್ಲಿ ಕರ್ತವ್ಯಕ್ಕೆ ಬಂದಿರುವ ಎನ್.ಆರ್. ಆಶಾ ಅವರಿಗೆ ಕುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್‌ನಿಂದ ಸೋಮವಾರ ಸನ್ಮಾನ ಸ್ವೀಕರಿಸಿ ಮನವಿ ಮಾಡಿದರು.

‘ಚಾಲಕರು ಆರ್ಥಿಕವಾಗಿ ಬಹಳ ತೊಂದರೆಯಲ್ಲಿ ಇದ್ದೇವೆ. ಸರ್ಕಾರದಿಂದ ಯಾವುದೇ ಒಂದು ಆರ್ಥಿಕ ಅಥವಾ ಇನ್ನಾವುದೇ ಸೌಲಭ್ಯಗಳು ಇದ್ದರೆ ನಮಗೆ ಅದರ ಉಪಯೋಗ ಮಾಡಿಕೊಡಿ’ ಎಂದು ಯೂನಿಯನ್ ಅಧ್ಯಕ್ಷ ವನೀನ್ ಲಾರೆನ್ಸ್ ಕೇಳಿಕೊಂಡರು.

‘ಲಾರಿ, ಕಾರು, ಟೆಂಪೋ ಟ್ರಾವೆಲ್ಸ್ ಸೇರಿದಂತೆ ಬಾಡಿಗೆ ವಾಹನಗಳನ್ನು ನಿಲ್ಲಿಸುವುದಕ್ಕೆ ಪಟ್ಟಣದಲ್ಲಿ ಸರಿಯಾದ ನಿಲ್ದಾಣ ವ್ಯವಸ್ಥೆಯೇ ಇಲ್ಲ. ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ನಿಲ್ಲಿಸಿಕೊಳ್ಳಬೇಕು. ಈ ಪ್ರದೇಶದಲ್ಲಿ ಹೆಚ್ಚು ವಾಹನಗಳನ್ನು ನಿಲ್ಲಿಸುವುದಕ್ಕೂ ಸ್ಥಳವಿಲ್ಲ. ಸಂಚಾರ ಸಮಸ್ಯೆ ಉದ್ಬವಿಸುತ್ತದೆ. ಆದ್ದರಿಂದ ಅಧಿಕಾರಿಗಳ ಮಟ್ಟದಲ್ಲಿ ನಿಲ್ದಾಣ ವ್ಯವಸ್ಥೆ ಮಾಡಿಕೊಡಬೇಕು’ ಎಂದರು.

ಸಂಘಟನಾ ಕಾರ್ಯದರ್ಶಿ ಜಿ. ಸಚಿನ್, ಸಂಘದ ಆರೀಫ್, ಹರೀಶ್ ಮಾರನಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.