ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಕೃಷಿಕರಿಗೆ ವೈಜ್ಞಾನಿಕ ಸಲಹೆ ನೀಡಿ: ಜಿಲ್ಲಾಧಿಕಾರಿ ಸೂಚನೆ

Last Updated 28 ಜುಲೈ 2021, 13:48 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಮೀನು ಸಾಕಾಣಿಕೆಗೆ ಯೋಗ್ಯವಿರುವ ಕೆರೆಗಳನ್ನು ಗುರುತಿಸಿ ಮೀನು ಕೃಷಿಕರಿಗೆ ವೈಜ್ಞಾನಿಕ ಸಲಹೆ ನೀಡಿ, ಆರ್ಥಿಕವಾಗಿ ಸಬಲೀಕರಣಗೊಳಿಸುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ’ಯುಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಹಾಗೂ ಜವಾಬ್ದಾರಿಯುತ ಬೆಳವಣಿಗೆಗಾಗಿ ರೂಪಿಸಿರುವ ಯೋಜನೆಯಾಗಿದೆ. ಮೀನು ಉತ್ಪಾದನೆಯ ನಿರ್ಣಾಯಕ ಅಂತರ ನೀಗಿಸುವುದು, ಮೂಲಭೂತ ಕಾರ್ಯಗಳ ಬಲವರ್ಧನೆ, ತಂತ್ರಜ್ಞಾನದ ಮೂಲಕ ಹಿಡುವಳಿ, ನಿರ್ವಹಣೆ ಮತ್ತು
ಅಧುನೀಕರಣ, ಮೌಲ್ಯ ಸರಪಳಿಯ ಬಲವರ್ಧನೆ ಈ ಯೋಜನೆ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.

ಫಲಾನುಭವಿ ಆಧಾರಿತ ಮತ್ತು ಆಧಾರಿತವಲ್ಲದ ಯೋಜನೆಗಳಿಗೆ 104 ಫಲಾನುಭವಿಗಳನ್ನುಆಯ್ಕೆ ಮಾಡಲಾಗಿದ್ದು, ಘಟಕ ವೆಚ್ಚ ₹476.90 ಲಕ್ಷಕ್ಕೆ ಅನುಮೋದಿಸಲಾಯಿತು.

ಮೀನುಗಾರಿಕೆ ಉಪ ನಿರ್ದೇಶಕ ಆರ್.ವಿವೇಕ್ ಅವರು ಇಲಾಖೆ ಯೋಜನೆಗಳ ಬಗ್ಗೆಅನುಷ್ಟಾನಕ್ಕೆ ಕ್ರಮ ಕೈಗೊಂಡಿರುವ ಬಗ್ಗೆ ವಿವರಿಸಿದರು.

2020-21 ನೇ ಸಾಲಿನ ಅನುಷ್ಟಾನಗೊಂಡಿರುವ ಯೋಜನೆಗಳ ಕೈಪಿಡಿಯನ್ನು ಗಿರೀಶ್ ಬಿಡುಗಡೆಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಕೃಷಿ ವಿಜ್ಞಾನ ಕೇಂದ್ರದವಿಜ್ಞಾನಿ ಶಿವಶಂಕರ್, ಮೀನು ಕೃಷಿಕ ಪ್ರತಿನಿಧಿ ನಾಗರಾಜು, ಕೃಷಿ ಅಧಿಕಾರಿ ಹಾಗೂ ಸಣ್ಣನೀರಾವರಿ ಅಧಿಕಾರಿ, ಲೀಡ್ ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT