ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಲು ಸಂಗಮೇಶ್ವರ ಸ್ವಾಮೀಜಿ ಸಲಹೆ

7
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಲು ಸಂಗಮೇಶ್ವರ ಸ್ವಾಮೀಜಿ ಸಲಹೆ

Published:
Updated:
Deccan Herald

ಹಾಸನ : ವಿದ್ಯಾವಂತರು ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜವೇನಹಳ್ಳಿ ಮಠದ ಮಠಾಧೀಶ ಸಂಗಮೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ನಗರದ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಲಿಂಗಾಯಿತ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಆಯೋಜಿಸಿದ್ದ ದ 2017–18ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇವಲ ಅಂಕ ಪಡೆಯಲು ಓದಿದರೇ ಪ್ರಯೋಜನವಿಲ್ಲ. ಜ್ಞಾನಕ್ಕಾಗಿ ಶಿಕ್ಷಣ ಪಡೆದರೆ ಉತ್ತಮ. ಪೋಷಕರು ತಮ್ಮ ಮಕ್ಕಳನ್ನು ಎಂಜಿನಿಯರ್, ಡಾಕ್ಟರ್ ಮಾಡಲು ಸೀಮಿತವಾಗುತ್ತಿರುವುದು ಸಮಾಜದ ಒಳಿತಿಗೆ ಉತ್ತಮವಲ್ಲ. ಹಣ ಮತ್ತು ಉತ್ತಮ ಗುಣವುಳ್ಳ ವ್ಯಕ್ತಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಾನೆ ಎಂದು ಹೇಳಿದರು.

ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೋಷಕರು ಮಕ್ಕಳಿಗೆ ಸರ್ಟಿಫಿಕೇಟ್‌ಗಾಗಿ ಶಿಕ್ಷಣ ನೀಡದೆ ಜ್ಞಾನಕ್ಕೆ ಪ್ರಾಮುಖ್ಯತೆ ಕೊಡಬೇಕು. ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ನುಡಿದರು.

ಶಿಕ್ಷಣ ಜೀವನದ ಒಂದು ಭಾಗವಾಗಿದೆ. ಬಡತನವಿದ್ದರೂ ಮಕ್ಕಳಿಗೆ ಕೊರತೆ ಬಾರದಂತೆ ಶಿಕ್ಷಣ ಕೊಡಿಸುತ್ತಾರೆ. ಮಕ್ಕಳು ಸಹ ಪೋಷಕರ ಆಸೆಯನ್ನು ನಿರಾಸೆ ಮಾಡಬಾರದು. ಕೂಡಿ ಬಾಳುವುದನ್ನು ಕಲಿಸಬೇಕು. ಎಷ್ಟೇ ಹಣವಿದ್ದರೂ ಸಂತೋಷವಿಲ್ಲದಿದ್ದರೇ ಪ್ರಯೋಜನವಿಲ್ಲ. ಅಮುಲ್ಯವಾದ ಜೀವನವನ್ನು ಉತ್ತಮ ಕೆಲಸಕ್ಕೆ ಬಳಸಿಕೊಂಡು ಸಮಾಜಮುಖಿಯಾಗಿ ಬಾಳುವಂತೆ ಕರೆ ನೀಡಿದರು.

2017–18ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ, ಅಖಿಲ ಭಾರತೀಯ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಸಿದ್ದೇಶ್ ನಾಗೇಂದ್ರ, ವೀರಶೈವ ಲಿಂಗಾಯಿತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಗೌರವಾಧ್ಯಕ್ಷ ಯು.ಎಸ್. ಬಸವರಾಜು, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ನಿರಂಜನ್, ಅಖಿಲ ಭಾರತೀಯ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ನಟರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !