ವಾಹನ ಗುದ್ದಿಸಿದಾಗ ಇಲ್ಲವೇ ಚರಂಡಿ ನಿರ್ಮಾಣ ಮಾಡಿದಾಗ ನಳಗಳು ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸಮಸ್ಯೆ ಇರುವ ಕಡೆ ಬಗೆಹರಿಸುತ್ತೇವೆ
ಅನ್ವರ್ ಪಾಷಾ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್
ಸಿದ್ದಾಪುರ ಗ್ರಾಮದಲ್ಲಿ ಸಾಕಷ್ಟು ಮನೆಗಳಿಗೆ ನಲ್ಲಿ ಅಳವಡಿಸಿಲ್ಲ. ಗ್ರಾಮ ಪಂಚಾಯಿತಿಗೆ ತಿಳಿಸಿದರೂ ನಲ್ಲಿ ಅಳವಡಿಸುವ ಪೈಪ್ ಲೈನ್ ಕೆಲಸ ಸಮರ್ಪಕವಾಗಿಲ್ಲ ಎಂದು ದೂರು ಬಂದರೂ ಗುತ್ತಿಗೆದಾರರು ಸರಿಪಡಿಸಿಲ್ಲ
ಜಿ.ಎನ್.ರಾಜಶೇಖರ್ ಸಾರಿಗೆ ಸಂಸ್ಥೆ ನಿವೃತ್ತ ಟ್ರಾಫಿಕ್ ಅಧಿಕಾರಿ
ಹೊಸ ಮನೆಗೂ ನಳ
2021 ರಲ್ಲಿ ಜೆಜೆಎಂ ಕಾಮಗಾರಿ ಕೈಗೊಳ್ಳುವ ಉದ್ದೇಶದಿಂದ ಸರ್ವೆ ಮಾಡಲಾಗಿದೆ. 4 ವರ್ಷದಲ್ಲಿ ಹೊಸ ಮನೆಗಳು ನಿರ್ಮಾಣ ಆಗಿವೆ. ಸರ್ವೆ ಸಂದರ್ಭದಲ್ಲಿ ಮನೆ ಮಾಲೀಕರ ಆಧಾರ್ ನಂಬರ್ ಸಂಗ್ರಹಿಸಿ ನಲ್ಲಿ ಅಳವಡಿಸಲು ನೋಂದಣಿ ಮಾಡಲಾಗಿತ್ತು. ಕೆಲವರು ಆದಾರ್ ಪ್ರತಿ ಕೊಟ್ಟು ನೋಂದಣಿಗೆ ಮಾಡಿಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ ಅನ್ವರ್ ಪಾಷಾ ಹೇಳಿದರು. ನಮ್ಮ ಮನೆಗೆ ನಳ ಹಾಕಿಲ್ಲ ಎಂದು ಸಾಕಷ್ಟು ಮಂದಿ ಕೇಳುತ್ತಿದ್ದಾರೆ. ಮಲೆನಾಡು ಕಡೆ ನಳ ಬೇಡ ಎಂದು ಹೇಳಿದವರು ಈಗ ನಳ ಹಾಕಿಸಿ ಎಂದು ಕೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಆಧಾರ್ ನಂಬರ್ ನೋಂದಣಿ ಮಾಡಿಸಿ ನಮ್ಮ ಇಲಾಖೆಗೆ ಪ್ರತಿ ಲಗತ್ತಿಸಿದರೆ ನಳ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಅವರು.