ಸಕಲೇಶಪುರ: ಪುರಸಭೆ ನಿವೇಶನ ಅಕ್ರಮ ‘ಇ’ ಖಾತೆ: ಆರೋಪ

7
ಮಾಜಿ ಸದಸ್ಯರು, ಅಧಿಕಾರಿಗಳ ಕೈವಾಡ: ಸದಸ್ಯ ದೂರು

ಸಕಲೇಶಪುರ: ಪುರಸಭೆ ನಿವೇಶನ ಅಕ್ರಮ ‘ಇ’ ಖಾತೆ: ಆರೋಪ

Published:
Updated:
Deccan Herald

ಸಕಲೇಶಪುರ: ಪುರಸಭೆ ಅಧಿಕಾರಿಗಳು ಹಾಗೂ ಹಿಂದಿನ ಅವಧಿಯ ಕೆಲ ಸದಸ್ಯರು ಕಾನೂನು ಬಾಹಿರವಾಗಿ ಪುರಸಭೆ ನಿವೇಶನವನ್ನು ಮಹಿಳೆಯೊಬ್ಬರ ಹೆಸರಿಗೆ ‘ಇ’ ಖಾತೆ ಮಾಡಿಕೊಟ್ಟಿರುವ ಪ್ರಕರಣವೊಂದನ್ನು ಪುರಸಭಾ ಸದಸ್ಯರೊಬ್ಬರು ಬೆಳಕಿಗೆ ತಂದಿದ್ದಾರೆ.

ಪುರಸಭಾ ವ್ಯಾಪ್ತಿಯ ವಾರ್ಡ್‌ ನಂಬರ್ 22ರ ಮಿಲಿಟರಿ ಕ್ಯಾಂಪ್ ಪಕ್ಕದಲ್ಲಿರುವ ಪುರಸಭೆ ನಿವೇಶನವನ್ನು ಗಾಯತ್ರಿ ಎಂಬುವವರ ಹೆಸರಿಗೆ ಅಕ್ರಮವಾಗಿ ‘ಇ’ ಖಾತೆ ಮಾಡಲಾಗಿದೆ ಎಂದು ಪುರಸಭಾ ಸದಸ್ಯ ಉಮೇಶ್ ಆಚಾರ್ ದಾಖಲೆ ಸಮೇತ ಶುಕ್ರವಾರ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ್ದಾರೆ.

ದಾಖಲೆಗಳಲ್ಲಿ ಗಾಯತ್ರಿ ಅವರಿಗೆ ನಿವೇಶನದ ಹಕ್ಕು ಹೇಗೆ ಬಂದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪುರಸಭೆ ಆಸ್ತಿಯನ್ನು ಸದಸ್ಯರು ಹಾಗೂ ಅಧಿಕಾರಿಗಳು ಏಕಾಏಕಿಯಾಗಿ ಯಾವುದೇ ವ್ಯಕ್ತಿ, ಅಥವಾ ಸಂಸ್ಥೆಗೆ ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲ. ಅಧಿಕಾರಿಗಳು ಕಾನೂನು ಗಾಳಿಗೆ ತೂರಿ ಕಳೆದ ಅಧ್ಯಕ್ಷರ ಅವಧಿಯಲ್ಲಿ ಈ ಅಕ್ರಮ ನಡೆದಿದೆ ಎಂದು ನೇರವಾಗಿ ಆರೋಪಿದ್ದಾರೆ.

ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ವಿಲ್ಸನ್ ಪತ್ರಿಕೆಯೊಂದಿಗೆ ಮಾತನಾಡಿ, ವಾರ್ಡ್ ನಂ. 22ರಲ್ಲಿ ಮಿಲಿಟರಿ ಕ್ಯಾಂಪ್ ಪಕ್ಕದ ಪುರಸಭೆ ನಿವೇಶನ ಕಾನೂನು ಬಾಹಿರವಾಗಿ ಗಾಯತ್ರಿ ಎಂಬುವವರಿಗೆ ‘ಇ’ ಖಾತೆ ಮಾಡಿಕೊಡಲಾಗಿದೆ. ‘ಇ’ ಖಾತೆ ವಜಾ ಮಾಡಿ ಎಂದು ದೂರು ನೀಡಿದ್ದಾರೆ. 5 ದಿನದ ಒಳಗೆ ನಿವೇಶನಕ್ಕೆ ಸಂಬಂಧಿಸಿದ ಮೂಲ ದಾಖಲೆ ಹಾಜರುಪಡಿಸುವಂತೆ ಗಾಯತ್ರಿ ಅವರಿಗೆ ನೋಟಿಸ್ ನೀಡಲಾಗಿದೆ. ದಾಖಲೆ ಪರಿಶೀಲಿಸಿ, ಕಾನೂನು ಬಾಹಿರವಾಗಿದ್ದರೆ ರದ್ದುಪಡಿಸಲಾಗುವುದು ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !