ಮಂಗಳವಾರ, ಮಾರ್ಚ್ 9, 2021
26 °C
ಅಂತರ ಜಿಲ್ಲಾ ಕಳ್ಳನ ಬಂಧನ, ಮತ್ತೊಬ್ಬ ಪರಾರಿ: ಎಸ್ಪಿ

15 ದ್ವಿಚಕ್ರ ವಾಹನ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಸೀಕೆರೆ: ಅಂತರ ಜಿಲ್ಲಾ ಬೈಕ್‌ ಕಳ್ಳನನ್ನು ಬಂಧಿಸಿರುವ ಅರಸೀಕೆರೆ ನಗರ ಠಾಣೆ ಪೊಲೀಸರು ಅಂದಾಜು ₹ 18 ಲಕ್ಷ  ಮೌಲ್ಯದ 15 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು‌ ತಾಲ್ಲೂಕಿನ ಹೂವಿನಹೊಳೆ ಗ್ರಾಮದ ರಂಗನಾಥ (28) ಬಂಧಿಸಲಾಗಿದ್ದು,  ಮತ್ತೊಬ್ಬ ಆರೋಪಿ  ಶ್ರವಣಬೆಳಗೊಳ ಹೋಬಳಿಯ ರಾಜಪುರ ಗ್ರಾಮದ ಮಟ್ಟನವಿಲೆ ಮಂಜ ತಲೆ ಮರೆಸಿಕೊಂಡಿದ್ದಾನೆ. ಬಂಧಿತನಿಂದ 6 ರಾಯಲ್‌ ಎನ್‌ಫಿಲ್ಡ್‌, 2 ಕೆ.ಟಿ.ಎಂ ಬೈಕ್‌, 4 ಬಜಾಜ್‌ ಪಲ್ಸರ್‌, 2 ಹೋಂಡಾ ಡಿಯೋ ಸ್ಕೂಟಿ, 1 ಅಪಾಚೆ ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಗುರುವಾರ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳ ವಿರುದ್ಧ ರಾಮನಗರ ಜಿಲ್ಲೆ ಬಿಡದಿ ಪೊಲೀಸ್‌ ಠಾಣೆಯಲ್ಲಿ 3, ಸೋಲೂರು ಠಾಣೆಯಲ್ಲಿ 1, ಬೆಂಗಳೂರು ನಗರ ಬಾಗಲಗುಂಟೆ ಠಾಣೆಯಲ್ಲಿ 4, ಪೀಣ್ಯ ಪೊಲೀಸ್‌ ಠಾಣೆಯಲ್ಲಿ 3, ನೆಲಮಂಗಲ ಠಾಣೆಯಲ್ಲಿ 1, ಅರಸೀಕೆರೆ ನಗರ ಠಾಣೆ ವ್ಯಾಪ್ತಿಯಲ್ಲಿ 3 ಬೈಕ್‌ ಕಳ್ಳತನ ಪ್ರಕರಣ ದಾಖಲಾಗಿದೆ ಎಂದರು.

ಅರಸೀಕೆರೆ ನಗರ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಅರಸೀಕೆರೆ ರೈಲ್ವೆ ನಿಲ್ದಾಣದ ಹತ್ತಿರ ಪಾಳು ಬಿದ್ದಿರುವ ಜಾಗದಲ್ಲಿ ಇಬ್ಬರು ಆರೋಪಿಗಳು ಕಳ್ಳತನ ಮಾಡಿ ತಂದಿದ್ದ ಬೈಕ್‌ಗಳ ನಂಬರ್‌ ಪ್ಲೇಟ್‌, ಎಂಜಿನ್‌, ಚಾರ್ಸಿ ನಂಬರ್‌ ಕಾಣದಂತೆ ಕಲ್ಲಿನಿಂದ ಉಜ್ಜಿ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಡಿ. 20ರಂದು ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ ರಂಗನಾಥನನ್ನು ಬಂಧಿಸಿದರು ಎಂದು ವಿವರಿಸಿದರು

ಕಾರ್ಯಾಚರಣೆಯಲ್ಲಿ ಶ್ರಮಿಸಿದ ಅರಸೀಕೆರೆ ನಗರ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರಯ್ಯ ಹಾಗೂ ಉಪ ನಿರೀಕ್ಷ ತಿಮ್ಮಯ್ಯ, ಬೇಲೂರು ಪಿಎಸ್‌ಐ ಎಸ್.ಜಿ.ಪಾಟೀಲ್ ಮತ್ತು ಸಿಬ್ಬಂದಿ ಮಂಜೇಗೌಡ, ರಂಗಸ್ವಾಮಿ, ರಘು, ಕುಮಾರ್, ಹರೀಶ್, ರಮೇಶ್, ಅನಿತಾ, ಶುಭಾ, ಪೀರ್‌ಖಾನ್,  ಕಚೇರಿಯ ಜೀಪ್ ಚಾಲಕ ಚಂದ್ರಶೇಖರ್ ಅವರ ಕಾರ್ಯವನ್ನು ಶ್ಲಾಘಿಸಿ ಪ್ರಶಂಸಾ ಪತ್ರ ನೀಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.