ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ರಾಮನ ಸ್ಮರಣೆಗೆ ಹಲವು ಕಾರ್ಯಕ್ರಮ

ಸಂತೋಷ್‌ ಸಿ.ಬಿ.
Published 22 ಜನವರಿ 2024, 6:10 IST
Last Updated 22 ಜನವರಿ 2024, 6:10 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಾದ್ಯಂತ ಶ್ರೀರಾಮನ ಸ್ಮರಣೆ ಮಾಡಲಾಗುತ್ತಿದ್ದು, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಸೋಮವಾರ ದೇವಾಲಯ ಸೇರಿದಂತೆ ವಿವಿಧ ಸಂಘ– ಸಂಸ್ಥೆಗಳು, ಆಟೊ ನಿಲ್ದಾಣ, ಮಾರುಕಟ್ಟೆಗಳಲ್ಲಿ, ನಗರ, ಪಟ್ಟಣ ಬಡಾವಣೆ, ಗ್ರಾಮಗಳಲ್ಲಿನ ಮನೆ ಮನೆಗಳಲ್ಲಿ ಹಬ್ಬದ ರೀತಿಯಲ್ಲಿ ಆಚರಣೆಗೆ ಸಿದ್ಧತೆ ಕೈಗೊಳ್ಳುತ್ತಿದ್ದಾರೆ.

ನಗರದ ಬಸ್ ನಿಲ್ದಾಣದ ರೈಲ್ವೆ ಲೈನ್ ಪಕ್ಕದ ಆಟೊ ನಿಲ್ದಾಣದಲ್ಲಿ ಆಟೊ ಚಾಲಕರ ಸಂಘ ಅಯೋಧ್ಯೆಯ ಶ್ರೀರಾಮ ಪ್ರತಿಷ್ಠಾಪನೆಗೆ ಶುಭಕೋರುವ ಫ್ಲೆಕ್ಸ್‌ ಹಾಕುವ ಮೂಲಕ ಭಕ್ತಿ ಮೆರೆದಿದ್ದಾರೆ. ಇನ್ನು ನಗರದ ಅನೇಕ ದೇವಾಲಯಗಳ ಆವರಣದಲ್ಲಿ ಎಲ್ಇಡಿ ಪರದೆಯ ಮೂಲಕ ಪ್ರಾಣ ಪ್ರತಿಷ್ಠಾಪನೆಯ ದೃಶ್ಯಾವಳಿಗಳನ್ನು ನೇರ ಪ್ರಸಾರ ಮಾಡಲು ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ನಗರದ ರಾಘವೇಂದ್ರ ಮಠ, ಸೀತಾರಾಮಾಂಜನೇಯ ದೇವಸ್ಥಾನ, ಕಂಬದ ನರಸಿಂಹ ಸ್ವಾಮಿ ದೇವಸ್ಥಾನ, ರಾಮ ಮಂದಿರ ಸೇರಿದಂತೆ ಇತರೆಡೆ ಸಂಭ್ರಮಕ್ಕೆ ಆಡಳಿತ ಮಂಡಳಿ ಮತ್ತು ಭಕ್ತರು ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಅಯೋಧ್ಯೆ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 70ಸಾವಿರ ಮನೆಗಳಿಗೆ ಮಂತ್ರಾಕ್ಷತೆಯನ್ನು ವಿತರಣೆ ಮಾಡಿದ್ದು, 2ಸಾವಿರ ಕಾರ್ಯಕರ್ತರು ಭಾಗಿಯಾಗಿದ್ದರು. ಜ.22 ರಂದು ಕಾರ್ಯಕ್ರಮದ ಸಂಭ್ರಮಕ್ಕಾಗಿ ನಗರದ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ತಿಳಿಸಿದ್ದಾರೆ.

ನಗರದ ಶ್ರೀರಾಮದೂತ ಹನುಮಾನ್ ದಂಡ್‌ ಟ್ರಸ್ಟ್ ವತಿಯಿಂದ ಚಿಕ್ಕ ಗರಡಿಯಲ್ಲಿಯೂ ಹೋಮ, ಪೂರ್ಣಾಹುತಿ, ಪ್ರಸಾದ ವಿನಿಯೋಗ, ಮುತ್ತೈದೆಯರಿಗೆ ಬಾಗಿನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಫ್ಲೆಕ್ಸ್ ಬಂಟಿಂಗ್ಸ್ ಬ್ಯಾನರ್ ಅಳವಡಿಸಲು ಸ್ಥಳೀಯ ಆಡಳಿತದಿಂದ ಅನುಮತಿ ಕಡ್ಡಾಯ. ನಗರಸಭೆಗೆ ಅರ್ಜಿಗಳು ಬಂದಿದ್ದು ಪೊಲೀಸರ ನಿರ್ದೇಶನ ಮಾರ್ಗಸೂಚಿಯಂತೆ ಅನುಮತಿ ನೀಡಲಾಗುತ್ತಿದೆ
ಯೋಗಾನಂದ ಹಾಸನ ನಗರಸಭೆ ಆಯುಕ್ತ
ಐ.ನೆಟ್ ಗೆಳೆಯರ ಬಳಗ ಹಾಗೂ ಶ್ರೀರಾಮ ಗೆಳೆಯರ ಬಳಗ ಸಹಯೋಗದೊಂದಿಗೆ 40 ಕೆ.ಜಿ. ಸಿಹಿ ವಿತರಣೆ ಬೃಹತ್ ಎಲ್ಇಡಿ ಪರದೆ ಅಳವಡಿಕೆ ಮೂಲಕ ನೇರ ಪ್ರಸಾರ ವ್ಯವಸ್ಥೆ ಮಾಡಲಾಗುತ್ತಿದೆ
ಐ–ನೆಟ್‌ ವಿಜಯಕುಮಾರ್
ಹಾಸನದ ಎನ್.ಆರ್. ವೃತ್ತದ ಸಮೀಪ ಇರುವ ಎಸ್‌ಬಿಐ ಬ್ಯಾಂಕ್ ಎದುರಿನ ಕೃಷ್ಣ ಕಾಂಪ್ಲೆಕ್ಸ್ ಹಳೆ ಅಂಚೆ ಕಚೇರಿ ರಸ್ತೆಯಲ್ಲೂ ವರ್ತಕರೆಲ್ಲ ಸೇರಿ ಜ.22 ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ
ಗಗನ್ ಗಾಂಧಿ ವರ್ತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT