ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ

Last Updated 5 ಸೆಪ್ಟೆಂಬರ್ 2021, 13:32 IST
ಅಕ್ಷರ ಗಾತ್ರ

ಹಾಸನ: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಮಧ್ಯಾಹ್ನ 2ರವರೆಗೆ ಅಗತ್ಯವಸ್ತುಗಳ ಖರೀದಿ, ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಭಾನುವಾರ ಜನಜೀವನ ಮಾಮೂಲಿನಂತಿತ್ತು. ಕರ್ಫ್ಯೂ ವಾತಾವರಣ ಕಂಡು ಬರಲಿಲ್ಲ.

ಕೆಲವು ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಟೇಬಲ್‌ ಸರ್ವಿಸ್‌ ಕೂಡ ಇತ್ತು. ಪೋಲಿಸರೂ ಜನ ಸಂಚಾರ, ಅಂಗಡಿ ತೆರೆದು ವ್ಯವಹಾರ ನಡೆಸುವುದನ್ನು ತಡೆಯಲು ಯತ್ನಿಸಲಿಲ್ಲ. ಹೀಗಾಗಿ ಹಲವು ಬಟ್ಟೆ ಅಂಗಡಿಗಳು, ದಿನಸಿ ಪದಾರ್ಥಗಳು, ಹಣ್ಣು, ತರಕಾರಿ ಮಾರಾಟಗಾರರು ಅಂಗಡಿ ತೆರೆದು ಎಂದಿನಂತೆ ವ್ಯಾಪಾರದಲ್ಲಿ ತಲ್ಲೀನರಾಗಿದ್ದರು. ಬೀದಿ ಬದಿ ತಿನಿಸುಗಳ ವ್ಯಾಪಾರಿಗಳು ಸಂಜೆ ಬಂದ್‌ ಮಾಡಿರಲಿಲ್ಲ.

ಕೆಲ ವರ್ತಕರು ಪೊಲೀಸರಿಗೆ ಹೆದರಿ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿದರೇ ವಿನಃ ವಾರಾಂತ್ಯದ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದಂತಿತ್ತು. ವಾಹನ ಸಂಚಾರ ಎಂದಿನಂತೆ ಇತ್ತು. ಮದ್ಯದಂಗಡಿಗಳ ಮುಂಬಾಗಿಲು ಮುಚ್ಚಿದ್ದರೂ ಕದ್ದುಮುಚ್ಚಿ ಮದ್ಯ ಮಾರಾಟ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT