ನೆರೆ ಸಂತ್ರಸ್ತರಿಗೆ ಹಾಮೂಲ್ ಹಾಲು

7
ಮೊದಲ ಹಂತದಲ್ಲಿ ಅಕ್ಕಿ, ತೊಗರಿ ಬೇಳೆ, ಬಟ್ಟೆ ರವಾನೆ

ನೆರೆ ಸಂತ್ರಸ್ತರಿಗೆ ಹಾಮೂಲ್ ಹಾಲು

Published:
Updated:
Deccan Herald

ಹಾಸನ : ನೆರೆ ಪೀಡಿತ ಕೊಡಗಿನ ಸಂತ್ರಸ್ತರಿಗೆ ಹಾಸನ ಹಾಲು ಒಕ್ಕೂಟ (ಹಾಮೂಲ್‌) ದಿಂದ 30 ಸಾವಿರ ಲೀಟರ್ ಹಾಲು ಹಾಗೂ ಇತರೆ ಆಹಾರ ಪದಾರ್ಥ ರವಾನಿಸಲಾಯಿತು.

ಕೊಡಗು ಹಾಗೂ ರಾಮನಾಥಪುರಕ್ಕೆ ಆಹಾರ ಸಾಮಗ್ರಿ ಹೊತ್ತು ಹೊರಟ ಮೂರು ಲಾರಿಗಳಿಗೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹಸಿರು ನಿಶಾನೆ ತೋರಿದರು.

ಮೊದಲ ಹಂತದಲ್ಲಿ 30 ಸಾವಿರ ಲೀಟರ್ ಹಾಲು, 5 ಸಾವಿರ ಬಿಸ್ಕೆಟ್ ಪ್ಯಾಕ್, 200 ಕ್ವಿಂಟಲ್‌ ಅಕ್ಕಿ, 5 ಕ್ವಿಂಟಲ್‌ ತೊಗರಿ ಬೇಳೆ ಹಾಗೂ ಬಟ್ಟೆ ಕಳುಹಿಸಲಾಯಿತು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೇವಣ್ಣ, ಮೊದಲ ಹಂತದಲ್ಲಿ ಅಂದಾಜು ₹ 15 ಲಕ್ಷ ಮೌಲ್ಯದ ಆಹಾರ ಪದಾರ್ಥಗಳನ್ನು ರವಾನೆ ಮಾಡಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಕಳುಹಿಸಲಾಗುವುದು. ಒಕ್ಕೂಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದು ದಿನದ ವೇತನ ಸುಮಾರು ₹ 10 ಲಕ್ಷ ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ಕೆಲ ದಾನಿಗಳು ಸಂತ್ರಸ್ತರಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ ಎಂದು ಹೇಳಿದರು.

ಕೊಡಗಿನಲ್ಲಿ ಈಗಾಗಲೇ 30 ಜೆ.ಸಿ.ಬಿ. ಮತ್ತು 100 ಎಂಜಿನಿಯರ್‌ಗಳು ಮೊಕ್ಕಂ ಹೂಡಿದ್ದು, ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಎಲ್ಲಾ ಅಗತ್ಯ ನೆರವು ನೀಡುವುದರ ಜತೆಗೆ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಅರಕಲಗೂಡು ತಾಲ್ಲೂಕಿನ ರಾಮನಾಥಪುರದ ನೆರೆ ಸಂತ್ರಸ್ತರಿಗೆ 3 ಸಾವಿರ ಲೀಟರ್ ಹಾಲು, ಒಂದು ಸಾವಿರ ಬಿಸ್ಕತ್‌ ಪ್ಯಾಕ್‌ ಹಾಗೂ ಹೊದಿಕೆ ನೀಡಲಾಗುತ್ತಿದೆ. ಸಕಲೇಶಪುರ ತಾಲ್ಲೂಕಿನ ಸಂತ್ರಸ್ತರಿಗೂ ಹಾಲು ಪೂರೈಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !