ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್‌ಬಾಟಲ್‌: ವಾಣಿಜ್ಯ ಉತ್ಪಾದನೆಗೆ ಸಿದ್ಧತೆ

ಮಾರಾಟ ಮಳಿಗೆ ಉದ್ಘಾಟಿಸಿದ ಪ್ರಧಾನ ವ್ಯವಸ್ಥಾಪಕ ಗೋವಿಂದರಾಜು ಹೇಳಿಕೆ
Last Updated 15 ಅಕ್ಟೋಬರ್ 2021, 14:33 IST
ಅಕ್ಷರ ಗಾತ್ರ

ಹಾಸನ:ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾಮೂಲ್)ದ ಮಹತ್ವಾಕಾಂಕ್ಷಿ
ಯೋಜನೆ ಪೆಟ್‍ಬಾಟಲ್ ಘಟಕ ನ.1 ರಿಂದ ವಾಣಿಜ್ಯ ಉತ್ಪಾದನೆ ಆರಂಭಿಸಲಿದೆ ಎಂದು ಒಕ್ಕೂಟದ
ಪ್ರಧಾನ ವ್ಯವಸ್ಥಾಪಕ ( ತಾಂತ್ರಿಕ) ಗೋವಿಂದರಾಜು ತಿಳಿಸಿದರು.

ಇಲ್ಲಿನ ಕುವೆಂಪು ನಗರದ ಮಾತೃಶ್ರೀ ಕಲ್ಯಾಣ ಮಂಟಪದ ಸಮೀಪದ ಮುಖ್ಯ ರಸ್ತೆಯಲ್ಲಿ ಶುಕ್ರವಾರ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಡೇರಿ ಆವರಣದಲ್ಲಿ ನಿರ್ಮಾಣವಾಗಿರುವ ಪೆಟ್‌ ಬಾಟಲ್ ಘಟಕವು ಒಂದು ತಿಂಗಳಿನಿಂದಪ್ರಾಯೋಗಿಕ ಚಾಲನೆಯಲ್ಲಿದೆ. ನ.1 ರಿಂದ ಪೆಟ್‍ಬಾಟಲ್‍ಗಳ ವಾಣಿಜ್ಯ ಉತ್ಪಾದನೆ ಆರಂಭಕ್ಕೆ ಸಿದ್ಧತೆನಡೆದಿದೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡ ದಕ್ಷಿಣ ಭಾರತದ ಮೊದಲ ಪೆಟ್‍ಬಾಟಲ್ ಸುವಾಸಿತಹಾಲಿನ ಘಟಕ ಎಂಬ ಹೆಗ್ಗಳಿಕೆ ಪಡೆದಿದ್ದು, ನಿತ್ಯ 5 ಲಕ್ಷ ಸುವಾಸಿತ ಹಾಲಿನ ಪೆಟ್‍ಬಾಟಲ್‍ ಉತ್ಪಾದಿಸುವಸಾಮರ್ಥ್ಯ ಹೊಂದಿದೆ ಎಂದುತಿಳಿಸಿದರು.

16 ಫ್ಲೇವರಡ್‌ ಮಿಲ್ಕ್‌ ಪೆಟ್‍ ಬಾಟಲ್‍ಗಳಲ್ಲಿ ಎಲ್ಲ ಹಾಲು ಮಾರಾಟದ ಮಳಿಗೆಗಳಲ್ಲಿ ಮಾರಾಟವಾಗಲಿದೆ. ಯುಎಚ್‍ಟಿ ಹಾಲಿನ ಮಾರಾಟ ಜಾಲವನ್ನು ಬಳಸಿಕೊಂಡು ದೇಶಾದಾದ್ಯಂತ ಮಾರಾಟದ ವ್ಯವಸ್ಥೆಮಾಡಲಾಗುವುದು ಎಂದು ಹೇಳಿದರು.

ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಪ್ರಿಯರಂಜನ್ ಮಾತನಾಡಿ, ಹಾಸನ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಸುಸಜ್ಜಿತ 51 ಮಿಲ್ಕ್ ಪಾರ್ಲರ್‌ಗಳಲ್ಲಿ ಕೆಎಂಎಫ್‌ನ 130ಕ್ಕೂ ಹೆಚ್ಚು ಉತ್ಪನ್ನಗಳು ಮಾರಾಟವಾಗುತ್ತಿವೆ. ಶೀಘ್ರದಲ್ಲಿಯೇ ಇನ್ನೂ 15 ಮಿಲ್ಕ್ ಪಾರ್ಲರ್‌ ತೆರೆಯಲು ಒಕ್ಕೂಟ ನಿರ್ಧರಿಸಿದೆಎಂದರು.

ಮಿಲ್ಕ್ ಪಾರ್ಲರ್ ಉದ್ಘಾಟಿಸಿದ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಹೊನ್ನವಳ್ಳಿ ಸತೀಶ್ ಮಾತನಾಡಿ, ಕೋವಿಡ್‌ ಲಾಕ್‍ಡೌನ್ ಸಂದರ್ಭದಲ್ಲಿ ಹೈನು ಉದ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿತ್ತು. ಕಳೆದ ಮೂರು ತಿಂಗಳಿನಿಂದ ಚೇತರಿಸಿಕೊಳ್ಳುತ್ತಿದ್ದು, ಒಂದೆರೆಡು ತಿಂಗಳಲ್ಲಿ ಸಹಜ ಸ್ಥಿತಿಗೆ ಮರಳಲಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಕೆ.ಜಿ ಹಾಲಿನ ಪುಡಿ ದರ ₹150 ಕ್ಕೆ ಕುಸಿದಿತ್ತು. ಈಗ ₹220 ರಿಂದ ₹250 ದರದಲ್ಲಿ ಮಾರಾಟವಾಗುತ್ತಿದೆ ಎಂದು ತಿಳಿಸಿದರು.

ಹಾಮೂಲ್‌ ಮಾರುಕಟ್ಟೆ ಅಧಿಕಾರಿ ಮಿಥುನ್ ಹಾಗೂ ಮಿಲ್ಕ್ ಪಾರ್ಲರ್ ಮಾಲೀಕರಾದ ದೀಪಕ್ ಮತ್ತು ನಾಗೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT