ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು | 86 ಶ್ವಾನ, 2 ಬೆಕ್ಕುಗಳಿಗೆ ರೇಬಿಸ್ ತಡೆ ಲಸಿಕೆ

Published 20 ಸೆಪ್ಟೆಂಬರ್ 2023, 13:25 IST
Last Updated 20 ಸೆಪ್ಟೆಂಬರ್ 2023, 13:25 IST
ಅಕ್ಷರ ಗಾತ್ರ

ಹಳೇಬೀಡು: ‘ನಾಯಿ ಕಚ್ಚಿದ ಮನುಷ್ಯನ ಆರೋಗ್ಯದ ಮೇಲೆ ದುಷ್ಟಾರಿಣಾಮ ಆಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಜನರು ತಮ್ಮ ಸಾಕು ಪ್ರಾಣಿಗಳಿಗೆ ರೇಬಿಸ್ ತಡೆ ಲಸಿಕೆ ಹಾಕಿಸಬೇಕು’ ಎಂದು ಮುಖ್ಯಪಶು ವೈದ್ಯಾಧಿಕಾರಿ ಎಂ.ವಿನಯ್ ಹೇಳಿದರು.

ಹಳೇಬೀಡಿನ ಪಶು ಆಸ್ಪತ್ರೆಯಲ್ಲಿ ರೇಬಿಸ್ ತಡೆ ಲಸಿಕೆ ಹಾಕುವ ಮಾಸಾಚರಣೆ ಅಂಗವಾಗಿ ಬುಧವಾರ ನಡೆದ ಉಚಿತ ಲಸಿಕಾ  ಅಭಿಯಾನದಲ್ಲಿ  ಅವರು ಮಾತನಾಡಿದರು.

‘ಶ್ವಾನಗಳಿಗೆ ರೇಬಿಸ್ ಲಸಿಕೆ ಹಾಕಿಸುವುದರಿಂದ ಅವುಗಳ ಆರೋಗ್ಯ ಸಂರಕ್ಷಣೆಗೆ ಅನುಕೂಲವಾಗುತ್ತದೆ. ಲಸಿಕೆ ಹಾಕಿಸಿದ ನಾಯಿ ಕಚ್ಚಿದರೆ ದುಷ್ಪಾರಿಣಾಮ ಕಡಿಮೆ ಇರುತ್ತದೆ. ನಾಯಿ ಕಚ್ಚಿದರೆ ತಕ್ಷಣ ವೈದ್ಯರಿಗೆ ತೋರಿಸಿ, ಚುಚ್ಚುಮದ್ದು ಹಾಕಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.

‘ಮಾರಾಣಾಂತಿಕ ಪ್ರಾಣಿಜನ್ಯ ರೋಗವಾದ ರೇಬೀಸ್ ನಿರ್ಮೂಲನೆಗೊಳಿಸುವುದು ಸರ್ಕಾರದ ಗುರಿಯಾಗಿದೆ ಸಾರ್ವಜನಿಕರು ಎಚ್ಚರವಹಿಸಬೇಕು. ಹಳೇಬೀಡು ಪಶು ಆಸ್ಪತ್ರೆಯಲ್ಲಿ 86 ನಾಯಿ ಹಾಗೂ 2 ಬೆಕ್ಕುಗಳಿಗೆ ಲಸಿಕೆ ಹಾಕಲಾಗಿದೆ. 9 ಲ್ಯಾಬ್ರಡೋರ್, 11 ಮುಧೋಳ, 25 ಡ್ಯಾಶ್ಹಂಡ್, 9 ಜರ್ಮನ್ ಶೆಪರ್ಡ್, 8 ಗೋಲ್ಡನ್ ರಿಟ್ರಿವರ್, ತಲಾ 2 ಪಗ್, ಪಿಟ್ ಬುಲ್ ಹಾಗೂ 20 ಸ್ಥಳೀಯ ತಳಿಯ ಶ್ವಾನಗಳಿಗೆ ಲಸಿಕೆ ಹಾಕಲಾಯಿತು ಎಂದು ಡಾ.ವಿನಯ್ ವಿವರಿಸಿದರು. ರೈತರಾದ ನಿಂಗಪ್ಪ, ಬಸ್ತಿಹಳ್ಳಿ ಜಗಧೀಶ, ಪ್ರಭಾಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT