ಸಕಲೇಶಪುರ: ಶಿವರಾತ್ರಿ ಅಂಗವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರಿಗೆ ಪಟ್ಟಣದ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಕಾಫಿ, ಬ್ರೆಡ್, ಹಣ್ಣು, ಬಿಸ್ಕತ್, ತಂಪು ಪಾನೀಯ ಹಾಗೂ ಕುಡಿಯುವ ನೀರನ್ನು ಗುರುವಾರ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ತಾರಾ ರೇಡಿಯೋ ರಾಘು, ಟ್ರಸ್ಟಿ ಬಾಲರಾಜ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಶಿವರಾತ್ರಿ ಸಂದರ್ಭ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುವ ಭಕ್ತರಿಗೆ ಸೇವೆ ಸಲ್ಲಿಸಲಾಗುತ್ತಿದ್ದು, ಈ ವರ್ಷವೂ ಎರಡು ದಿನಗಳ ಕಾಲ ಬೆಳಿಗ್ಗೆ 4 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಾದಯಾತ್ರಿಗಳಿಗೆ ಅಗತ್ಯವಾದ ಆಹಾರ ಪದಾರ್ಥಗಳು ಹಾಗೂ ಪಾನೀಯಗಳನ್ನು ವಿತರಿಸಲಾಗುತ್ತಿದೆ ಎಂದರು.

ಇದೇ ರೀತಿ ಪಟ್ಟಣದಲ್ಲಿ ರಾಘವೇಂದ್ರ ಸ್ವಾಮಿಯವರ ಆರಾಧನೋತ್ಸವ ಹಾಗೂ ಜಯಂತ್ಯುತ್ಸವವನ್ನು ಕೂಡ ಟ್ರಸ್ಟ್ ವತಿಯಿಂದ ನಿಯಮಿತವಾಗಿ ಆಚರಿಸಲಾಗುತ್ತಿದೆ. ಸಕಲೇಶಪುರದಲ್ಲಿ ಸಾವಿರಾರು ರಾಘವೇಂದ್ರ ಸ್ವಾಮಿ ಭಕ್ತರು ಇರುವುದರಿಂದ, ಇಲ್ಲಿಯೇ ರಾಘವೇಂದ್ರ ಸ್ವಾಮಿಯ ಮಠವನ್ನು ಸ್ಥಾಪಿಸುವುದು ಭಕ್ತಾದಿಗಳ ಬಹುಕಾಲದ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ಅಧ್ಯಕ್ಷರಾದ ತಾರಾ ರಾಘವೇಂದ್ರ ಅವರ ನೇತೃತ್ವದಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಟ್ರಸ್ಟ್ ಸದಸ್ಯರಾದ ಜಗದೀಶ್, ಸೋಮಶೇಖರ್, ವಿಜೀತ್, ಅಪ್ಪಣ್ಣಿ, ಅಕ್ಷತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.