ಹೊಳೆನರಸೀಪುರ: ಜೀವ ಸಂಕುಲಕ್ಕೆ ಬದಕಲು ಇರುವುದೊಂದೇ ಸ್ಥಳ ಭೂಮಿ. ಈ ಭೂಮಿ ಮೇಲೆ ಜೀವಿಸುತ್ತಿರುವ ಪ್ರತೀ ಜೀವಿಗೂ ಉಸಿರಾಡಲು ಗಾಳಿ, ಕುಡಿಯಲು ನೀರು ಸೂರ್ಯನ ಬೆಳಕು, ಆಹಾರ ಪದಾರ್ಥ ಎಲ್ಲವೂ ಅವಶ್ಯಕ. ಇವೆಲ್ಲವೂ ನಮಗೆ ಪರಿಸರದಿಂದ ಸಿಗುತ್ತಿದೆ ಆದ್ದರಿಂದ ಇವುಗಳನ್ನು ಹಾಳು ಮಾಡಬೇಡಿ ಎನ್ನುವ ಸಂದೇಶವನ್ನು ಪಟ್ಟಣದ ವಾಸವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ನೀಡಿದರು.

ಗಿಡ ಮರುಗಳು ಇಲ್ಲದಿದ್ದರೆ ಮಳೆ ಬರಲ್ಲ, ಮಳೆ ಬರದಿದ್ದರೆ ಬೆಳೆ ಬೆಳೆಯಲು ಸಾಧ್ಯ ಇಲ್ಲ. ಬೆಳೆ ಇಲ್ಲದಿದ್ದರೆ ಆಹಾರ ಸಿಗಲ್ಲ. ಆಹಾರ ಇಲ್ಲದಿದ್ದರೆ ನಾವು ಬದುಕಲು ಸಾಧ್ಯ ಇಲ್ಲ. ಆದ್ದರಿಂದ ಗಿಡಮರಗಳನ್ನು ನೆಟ್ಟು ಬೆಳೆಸಿ ಎಂಬ ಸಂದೇಶ ನೀಡಿದರು.

ಹಸಿರೆಲೆಗಳನ್ನು ಮೈಗೆ ಸುತಿಕೊಂಡು. ಕೊಂಬೆಗಳನ್ನು ತಲೆಮೇಲೆ ಸಿಕ್ಕಿಸಿಕೊಂಡು, ಗಿಡಮರಗಳ ವೇಷ ಹಾಕಿಕೊಂಡು ಬ್ಯಾಂಡ್ಸೆಟ್ ಮೂಲಕ ಗಮನ ಸೆಳೆದ ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸುವ ಪ್ಲಕಾರ್ಡ್ಗಳನ್ನು ಹಿಡಿದು ಪ್ರಮುಖ ಬೀದಿಗಳಲ್ಲಿ ಸಾಗಿ ಇಲ್ಲಿನ ಸುಭಾಶ್ ವೃತ್ತದಲ್ಲಿ ಸಮಾವೇಶಗೊಂಡು ಅರ್ಧಗಂಟೆ ಕಾಲ ಬೀದಿ ನಾಟಕ ಆಡಿ ಗಮನಸಳೆದರು.

ಸಂಸ್ಥೆಯ ಅಧ್ಯಕ್ಷ ಹನುಮಂತಕುಮಾರ್, ಮುಖ್ಯಶಿಕ್ಷಕ, ಜಯಶಂಕರ್, ಶಿಕ್ಷಕಿ ಅಶ್ವನಿ, ಸಕೀನಾ, ಶಶಿಧರ್, ಧರ್ಮ, ಕಾರ್ಯದರ್ಶಿ ಬಾಲಜಿ, ನಾಗೇಂದ್ರಕುಮಾರ್, ಅನಂತಕೃಷ್ಣ, ಅಶೋಕ್ಕುಮಾರ್, ಕಾವ್ಯದಿನೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.