ಮಂಗಳವಾರ, ಏಪ್ರಿಲ್ 13, 2021
32 °C

ದನಗಾಹಿ ಮಹಿಳೆ ಕೊಲೆ: ಶವ ಹೂತ ದುಷ್ಕರ್ಮಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳೇಬೀಡು: ದನ ಮೇಯಿಸಲು ತೆರಳಿದ್ದ ಮಹಿಳೆಯನ್ನು ಕೊಲೆಗೈದು ಮಣ್ಣಿನಲ್ಲಿ ಮುಚ್ಚಿ ಹಾಕಿರುವ ಘಟನೆ ಮಾದಿಹಳ್ಳಿ ಹೋಬಳಿಯ ಹಾಲ್ತೋರೆ ಗ್ರಾಮದಲ್ಲಿ ಬುಧವಾರ ನಡೆದಿದೆ.

ಪುಟ್ಟಲಕ್ಷಮಮ್ಮ (50) ಕೊಲೆಯಾದ ಮಹಿಳೆ. ದನ ಮೇಯಿಸಲು ಹೋದ ಪುಟ್ಟಲಕ್ಷ್ಮಮ್ಮ ಬುಧವಾರ ರಾತ್ರಿಯಾದರೂ ಮನೆಗೆ ಬರಲಿಲ್ಲ. ಮನೆಯವರು ಗಾಬರಿಗೊಂಡು ಹುಡುಕಾಡಿದರೂ ಸಿಗಲಿಲ್ಲ. ಗುರುವಾರ ದನ ಮೇಯಿಸುವ ಸ್ಥಳದಲ್ಲಿ ಮಣ್ಣಿನಲ್ಲಿ ಮುಚ್ಚಿದ ಶವ ಪತ್ತೆಯಾಗಿದೆ.

ಯಾರು ಯಾವ ಕಾರಣಕ್ಕೆ ಕೊಲೆ ಮಾಡಿದರೂ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಪೊಲೀಸರು ಶ್ವಾನದಳ ಸಿಬ್ಬಂದಿಯೊಂದಿಗೆ ಬಂದು ಸ್ಥಳ ಪರಿಶೀಲಿಸಿದರು.

ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರೀಕ್ಷೆಗಾಗಿ ಶವ ಹೊರ ತೆಗೆಯಲು ಉಪ ವಿಭಾಗಾಧಿಕಾರಿಗಳ ಆದೇಶ ನೀಡಲು ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.