ರಾಮನಾಥಪುರ: ಎಲ್ಲಿ ನೋಡಿದರು ಗುಂಡಿ ಬಿದ್ದ ರಸ್ತೆ, ಒಳ ಚರಂಡಿಯಲ್ಲಿ ಕಸದ ರಾಶಿ, ರಸ್ತೆಯ ಎರಡೂ ಬದಿ ಗಿಡಗಂಟಿಗಳು... ರಾಮನಾಥಪುರ ಸಮೀಪದ ರುದ್ರಪಟ್ಟಣವೆಂಬ ಸಂಗೀತ ಗ್ರಾಮದ ಚಿತ್ರಣವಿದು.

ಸಂಗೀತದ ಮೂಲಕವೇ ರಾಜ್ಯದ ಗಮನ ಸೆಳೆದ ಈ ಗ್ರಾಮ ಮೂಲ ಸೌಕರ್ಯ ವಿಲ್ಲದೆ ಸೂರಗಿದೆ, ಕಾವೇರಿ ನದಿ ಗ್ರಾಮದ ಪಕ್ಕದಲೇ ಹರಿದರೂ ಜನರಿಗೆ ಕುಡಿಯಲು ಶುದ್ಧ ನೀರಿಲ್ಲ, ನೀರನ್ನು ಶುದ್ಧೀಕರಿಸಿ ವಿತರಿಸುವ ವ್ಯವಸ್ಥೆ ಈವರೆಗೆ ಆಗಿಲ್ಲ. ನಾಲ್ಕು ದಿನಕೊಮ್ಮೆ ಕೊಳವೆ ಬಾವಿ ನೀರನ್ನು ಬಿಡುವುದೇ ದೊಡ್ಡ ಸಾಧನೆ ಎಂದು ಗ್ರಾಮಸ್ಥ ಮಾರ್ಕಂಡಯ್ಯ ಬೇಸರ ವ್ಯಕ್ತಪಡಿಸುತ್ತಾರೆ.
ಈ ಗ್ರಾಮ ಪ್ರವಾಸಿ ತಾಣವಾಗಿರುವುದರಿಂದ ಶನಿವಾರ ಮತ್ತು ಭಾನುವಾರ 500 ರಿಂದ 1000 ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಇಲ್ಲಿನ ಪ್ರಕೃತಿ ಸೌಂದರ್ಯ ಹಾಗೂ ಸಂಗೀತದ ಸಪ್ತ ಸ್ವರ ಧ್ಯಾನ ಮಂದಿರ, ಕಂಚಿ ಕಾಮಾಕ್ಷಿ, ಈಶ್ವರ ದೇವಸ್ಥಾನ, ರಾಮೇಶ್ವರ ಇನ್ನು ಹಲವಾರು ಐತಿಹಾಸಿಕ ಇನ್ನೇಲ್ಲೆ ಉಳ್ಳ ದೇವಸ್ಥಾನವನ್ನು ವಿಕ್ಷೀಸಲು ಜನರು ಬರುತ್ತಾರೆ. ಬರುವವರು ಅರಕಲಗೂಡು ಅಥವಾ ಮೈಸೂರು ಮಾರ್ಗವಾಗಿ ಬರಬೇಕಾಗುತ್ತದೆ. ರಾಮನಾಥಪುರದಿಂದ ಈ ಗ್ರಾಮ ಕೇವಲ 8 ಕಿ.ಮೀ. ದೂರವಿದ್ದರೂ ಹೋಗಲು ಒಂದು ಗಂಟೆ ಬೇಕಾಗುತ್ತದೆ. ಅಷ್ಟರ ಮಟ್ಟಿಗೆ ರಸ್ತೆಗಳು ಹದಗೆಟ್ಟಿವೆ.

‘ಸ್ಥಳೀಯ ಶಾಸಕ ಎ.ಮಂಜು ಗ್ರಾಮದ ರಸ್ತೆಗಳನ್ನು ದುರಸ್ತಿ ಮಾಡಿಸುತ್ತೇನೆ ಮತ್ತು ಕಾವೇರಿ ನದಿಯ ನೀರನ್ನು ಶುದ್ಧಿಕರಿಸಿ, ಪೈಪ್‌ಲೈನ್ ಮೂಲಕ ಒದಗಿಸಲು ವ್ಯವಸ್ಥೆ ಮಾಡಿಸುತ್ತೇನೆ ಎಂದು ಅಶ್ವಾಸನೆ ನೀಡಿದರು. ಈವರೆಗೆ ಅದು ಹೀಡೆರಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಶ್ರೀಕಂಠಯ್ಯ.

ಇದೇ ಗ್ರಾಮದಲ್ಲಿ ಪ್ರತಿವರ್ಷ ಮೇ ತಿಂಗಳಿನಲ್ಲಿ ಅದ್ದೂರಿ ಸಂಗೀತೋತ್ಸವ ನಡೆಯುತ್ತೆ, ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ತಮಿಳನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಸಂಗೀತಾಸಕ್ತರು ಬರುತ್ತಾರೆ. ಕನಿಷ್ಟ ಮೂಲ ಸೌಕರ್ಯವೂ ಇಲ್ಲದ ಈ ಗ್ರಾಮಕ್ಕೆ ಕೆಲವು ಸೌಲಭ್ಯಗ ಳನ್ನಾದರೂ ಒದಗಿಸಬೇಕಾಗಿದೆ ಎಂಬುದು ಸಂಗೀತ ವಿದ್ವಾನ್ ಆರ್.ಕೆ.ಪದ್ಮಾನಾಭ ಅವರ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.