ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸುಳ್ಳು ಭರವಸೆಗೆ ಮರುಳಾಗಬೇಡಿ: ಎಚ್.ಎಂ.ರೇವಣ್ಣ

Published 28 ಏಪ್ರಿಲ್ 2024, 16:16 IST
Last Updated 28 ಏಪ್ರಿಲ್ 2024, 16:16 IST
ಅಕ್ಷರ ಗಾತ್ರ

ಶಿಗ್ಗಾವಿ: ಬಿಜೆಪಿ ಸುಳ್ಳು ಭರವಸೆಗೆ ಮರುಳಾಗಬೇಡಿ, ಯಾರದೋ ಯೋಜನೆಗೆ ತಮ್ಮ ಪಟ್ಟಿ ಹಚ್ಚಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಯಿಂದ ಮೋಸಕ್ಕೆ ಒಳಗಾಗದ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಬಿಜೆಪಿ ವಿರೋಧ ಹರಿಹಾಯ್ದರು.

ತಾಲ್ಲೂಕಿನ ಬಂಕಾಪುರದಲ್ಲಿ ಭಾನುವಾರ ಧಾರವಾಡ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ನಡೆದ ರೋಡ್ ಶೋದಲ್ಲಿ ಮಾತನಾಡಿದ ಅವರು, ಬಿಜೆಪಿ ಜನರ ನಂಬಿಕೆಗಳನ್ನು ಕಳೆದುಕೊಂಡಿದೆ. ಖಾಲಿ ಬ್ಯಾಂಕ್ ಖಾತೆಗೆ ಹಣ ನೀಡುವುದಾಗಿ ಹೇಳಿದ ಬಿಜೆಪಿ ಈ ವರೆಗೆ ಒಂದು ಪೈಸಾ ಜಮಾ ಮಾಡಲಿಲ್ಲ. ಹೀಗಾಗಿ ಜನ ಬಿಜೆಪಿ ಕುರಿತು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಚುನಾವಣೆ ಮುನ್ನ ನೀಡಿದ ಮಾತಿನಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನಮನಕ್ಕೆ ಹತ್ತಿರವಾಗಿದೆ. ಅದನ್ನು ಸಹಿಸದ ಬಿಜೆಪಿ ಗ್ಯಾರಂಟಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಗ್ಯಾರಂಟಿ ಬಳಕೆ ಮಾಡಿಕೊಂಡ ಬಡಕೂಲಿಕಾರರಿಗೆ, ರೈತರಿಗೆ, ಯುವಕರಿಗೆ ಮತ್ತು ಮಹಿಳೆಯರಿಗೆ ಕಾಂಗ್ರೆಸ್ ಕಡೆಗಣಿಸಲಾರರು ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡ ಬಸವರಾಜ ಗುರಿಕಾರ ಮಾತನಾಡಿದರು. ಧಾರವಾಡ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ರಾಜ್ಯ ಗಡಿ ಪ್ರದೇಶದ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾಂಗ್ರೆಸ್ ಮುಖಂಡ ಯಾಸೀರಖಾನ್ ಪಠಾಣ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಬಿ.ಸಿ.ಪಾಟೀಲ, ಸವಣೂರ ತಾಲ್ಲೂಕು ಅಧ್ಯಕ್ಷ ಎಂ.ಜೆ.ಮುಲ್ಲಾ, ಮುಖಂಡರಾದ ಶಿವಾನಂದ ರಾಮಗೇರಿ, ವೀರೇಶ ಆಜೂರ, ಸತೀಶ ಆಲದಕಟ್ಟಿ, ಶಂಭಣ್ಣ ಆಜೂರ, ಎಂ.ಎನ್.ಹೊನ್ನಕೇರಿ, ಬಸವರಾಜ ರಾಗಿ, ಎಂ.ಎಂ.ಖಾಜಿ, ಸಿ.ಎಸ್.ಪಾಟೀಲ, ರಾಜು ಕಮ್ಮಾರ, ಗದಿಗೆಪ್ಪ ಬಳ್ಳಾರಿ, ಯಲ್ಲಪ್ಪ ನರಗುಂದ, ಅಯೋಬಖಾನ್ ಪಠಾಣ, ಯಸೋಬ ಭಾವಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT