ಸೋಮವಾರ, ಜುಲೈ 4, 2022
24 °C

ಹಾವೇರಿ-ನಿರಂತರ ಮಳೆ: 35 ಮನೆಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿಯಿಂದ ಗುರುವಾರ ತಡರಾತ್ರಿಯವರೆಗೆ ತುಂತುರು ಮಳೆ ಸುರಿಯಿತು. ಕೆಲವೊಮ್ಮೆ ಜೋರಾದ ಮಳೆ ಸುರಿಯಿತು. ನಿರಂತರ ಮಳೆಯಿಂದ ಜಿಲ್ಲೆಯಾದ್ಯಂತ ಒಟ್ಟು 35 ಮನೆಗಳಿಗೆ ಹಾನಿಯಾಗಿದೆ. 

ಹಾವೇರಿ ತಾಲ್ಲೂಕಿನಲ್ಲಿ 22, ರಾಣೆಬೆನ್ನೂರಿನಲ್ಲಿ 2, ಹಿರೇಕೆರೂರಿನಲ್ಲಿ 1, ಬ್ಯಾಡಗಿಯಲ್ಲಿ 5, ಹಾನಗಲ್ಲ 1, ರಟ್ಟೀಹಳ್ಳಿಯಲ್ಲಿ 4 ಮನೆಗಳು ಭಾಗಶಃ ಶಿಥಿಲವಾಗಿವೆ. 

ನಗರದ ತಗ್ಗು ಪ್ರದೇಶ ಹಾಗೂ ರಸ್ತೆಗಳಲ್ಲಿ ಮಳೆ ನೀರು ನಿಂತು ಜನ ಹಾಗೂ ವಾಹನಗಳ ಸಂಚಾರಕ್ಕೆ ತೊಡಕಾಯಿತು. ಅಲ್ಲದೇ ದಿನವಿಡಿ ಮಳೆ ಸುರಿದಿದ್ದರಿಂದ ನಗರದ ಬಹುತೇಕ ರಸ್ತೆಗಳು ಜನರ ಸಂಚಾರವಿಲ್ಲದೇ ಬಿಕೋ ಎನ್ನುತ್ತಿರುವುದು ಕಂಡು ಬಂದಿತು.

ಜಿಟಿಜಿಟಿ ಮಳೆಯಿಂದ ನಗರದ ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ಜನಸಂಚಾರ ವಿರಳವಾಗಿತ್ತು. ಹಾನಗಲ್ಲ, ಶಿಗ್ಗಾವಿ, ಸವಣೂರು, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯ ಸುರಿಯಿತು. 

ಮಳೆ ವಿವರ:

ಜಿಲ್ಲೆಯಲ್ಲಿ ಬುಧವಾರ ಹಾವೇರಿ ತಾಲ್ಲೂಕಿನಲ್ಲಿ 50.8 ಮಿಮೀ, ರಾಣೆಬೆನ್ನೂರು 41.6 ಮಿಮೀ, ಬ್ಯಾಡಗಿ 53.6 ಮಿಮೀ, ಹಿರೇಕೆರೂರು 59.4 ಮಿಮೀ, ರಟ್ಟೀಹಳ್ಳಿ 48.2 ಮಿಮೀ, ಸವಣೂರು 26.5ವಿಮೀ, ಶಿಗ್ಗಾವಿ 21.6 ಮಿಮೀ ಹಾಗೂ ಹಾನಗಲ್ಲ ತಾಲೂಕಿನಲ್ಲಿ 29.1 ಮಿಮೀ ಮಳೆ ಸುರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.