ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 56 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 390ಕ್ಕೆ ಏರಿಕೆಯಾದ ಪ್ರಕರಣಗಳು: 31 ಸೋಂಕಿತರು ಗುಣಮುಖ
Last Updated 17 ಜುಲೈ 2020, 14:32 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆ, ಕಿರಿಯ ಆರೋಗ್ಯ ಸಹಾಯಕರು ಮತ್ತು ಕೆಎಸ್‌ಆರ್‌ಪಿ ಪೊಲೀಸ್‌ ಸಿಬ್ಬಂದಿ ಸೇರಿದಂತೆಶುಕ್ರವಾರ 56 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. 31 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 390 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ 275 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 108 ಪ್ರಕರಣಗಳು ಸಕ್ರಿಯವಾಗಿದ್ದು, ಈವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ.

ಶುಕ್ರವಾರ ರಾಣೇಬೆನ್ನೂರು ತಾಲ್ಲೂಕಿನ 36, ಹಾವೇರಿ ತಾಲ್ಲೂಕಿನ 12 ಹಾಗೂ ಶಿಗ್ಗಾವಿ ತಾಲ್ಲೂಕಿನ 8 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಹಾವೇರಿ-16, ಶಿಗ್ಗಾವಿ ಹಾಗೂ ಹಾನಗಲ್ ತಾಲ್ಲೂಕಿನ ತಲಾ ನಾಲ್ಕು ಮತ್ತು ಬ್ಯಾಡಗಿ ತಾಲ್ಲೂಕಿನ 3 ಮಂದಿ ಸೇರಿ 31 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಸೋಂಕಿತರ ವಿವರ:

ಹಾವೇರಿ ನಗರದ ಕಲ್ಲುಮಂಟಪ ರಸ್ತೆಯ ಪಿ-31779 ಸಂಪರ್ಕಿತರಾದ 58 ವರ್ಷದ ಪುರುಷ (ಪಿ-52118) ಹಾಗೂ ಹಾವೇರಿ ತಾಲ್ಲೂಕು ಆಲದಕಟ್ಟಿಯ 31 ವರ್ಷದ ಮಹಿಳೆ (ಪಿ-52192), ಕನವಳ್ಳಿ ಗ್ರಾಮದವರಾದ 60 ವರ್ಷದ ಮಹಿಳೆ (ಪಿ-52220), 51 ವರ್ಷದ ಮಹಿಳೆ (ಪಿ-52247), 61 ವರ್ಷದ ಪುರುಷ (ಪಿ-52266), 68 ವರ್ಷದ ಪುರುಷ (ಪಿ-52281), 55 ವರ್ಷದ ಮಹಿಳೆಗೆ (ಪಿ-52305) ಸೋಂಕು ದೃಢಪಟ್ಟಿದೆ.

ಗುತ್ತಲದ 40 ವರ್ಷದ ಕಿರಿಯ ಆರೋಗ್ಯ ಸಹಾಯಕ (ಪಿ-52329) ಹಾಗೂ 34 ವರ್ಷದ ಕಿರಿಯ ಆರೋಗ್ಯ ಸಹಾಯಕಿ (ಪಿ-52365), ಪಿ-14605ರ ಸಂಪರ್ಕಿತೆ ಗುತ್ತಲದ 36 ವರ್ಷದ ಆಶಾ ಕಾರ್ಯಕರ್ತೆ (ಪಿ-52377), ಪಿ-28497ರ ಸಂಪರ್ಕಿತ ಹಾವೇರಿ ಶಿವಬಸವನಗರದ 35 ವರ್ಷದ ಪುರುಷ (ಪಿ-52624), ಹಾವೇರಿ ನಗರದ ದಾನೇಶ್ವರಿ ನಗರದ 45 ವರ್ಷದ ಪುರುಷನಿಗೆ (ಪಿ-52676) ಸೋಂಕು ಪತ್ತೆಯಾಗಿದೆ.

ಶಿಗ್ಗಾವಿಯ ಕೆ.ಎಸ್.ಆರ್.ಪಿ.ಸಿ. ಪೊಲೀಸರಾದ 42 ವರ್ಷದ ಪುರುಷ(ಪಿ-52410) ಹಾಗೂ 41 ವರ್ಷದ ಪುರುಷ(ಪಿ-52434), ಬಂಕಾಪುರದ ಶಾ ಬಜಾರ್‍ನ 17 ವರ್ಷದ ಬಾಲಕಿ (ಪಿ-52454), ಪಿ-31816ರ ಸಂಪರ್ಕಿತ ಶಿಗ್ಗಾವಿ ಜಯನಗರದ 30 ವರ್ಷದ ಪುರುಷ (ಪಿ-52469), ಶಾ ಬಜಾರನ 18 ವರ್ಷದ ಯುವತಿ (ಪಿ-52478), 58 ವರ್ಷದ ಪುರುಷ (ಪಿ-52498), 36 ವರ್ಷದ ಮಹಿಳೆ (ಪಿ-52517) ಹಾಗೂ ಶಿಗ್ಗಾವಿ ಹಳೇಪೇಟೆ 55 ವರ್ಷದ ಪುರುಷ (ಪಿ-52555) ಪಿ-28401ರ ಸಂಪರ್ಕಿತೆ. ಈ ಎಲ್ಲರ ಗಂಟಲುದ್ರವವನ್ನು ಜುಲೈ 12ರಿಂದ 15ರ ಅವಧಿಯಲ್ಲಿ ತೆಗೆಯಲಾಗಿದ್ದು, ಜುಲೈ 16ರಂದು ಲ್ಯಾಬ್ ವರದಿಯಲ್ಲಿ ಪಾಸಿಟಿವ್ ಬಂದಿದೆ.

ರಾಣೆಬೆನ್ನೂರಿನ ಮಾರುತಿ ನಗರದ 26 ವರ್ಷದ ಯುವಕ (ಪಿ-52603) ರಾಣೆಬೆನ್ನೂರಿನ ನಿವಾಸಿ 42 ವರ್ಷದ ಪುರುಷ (ಪಿ-52655), 48 ವರ್ಷದ ಮಹಿಳೆ (ಪಿ-52660), 18 ವರ್ಷದ ಯುವಕ (ಪಿ-52689), 41 ವರ್ಷದ ಮಹಿಳೆ (ಪಿ-52699), 11 ವರ್ಷದ ಬಾಲಕಿ (ಪಿ-52731) , 21 ವರ್ಷದ ಯುವಕ (ಪಿ-52744), 48 ವರ್ಷದ ಪುರುಷ (ಪಿ-52755), 30 ವರ್ಷದ ಪುರುಷ (ಪಿ-52766), 22 ವರ್ಷದ ಯುವತಿ (ಪಿ-52772), 52 ವರ್ಷದ ಪುರುಷ (ಪಿ-52782), 51 ವರ್ಷದ ಮಹಿಳೆ (ಪಿ-52787), 57 ವರ್ಷದ ಮಹಿಳೆ (ಪಿ-52794), 90 ವರ್ಷದ ವೃದ್ಧ (ಪಿ-52800), 23 ವರ್ಷದ ಯುವತಿ (ಪಿ-52802), 65 ವರ್ಷದ ಮಹಿಳೆ (ಪಿ-52804), 36 ವರ್ಷದ ಮಹಿಳೆ (ಪಿ-52807), 40 ವರ್ಷದ ಮಹಿಳೆ (ಪಿ-52822), 50 ವರ್ಷದ ಪುರುಷ (ಪಿ-52828), 30 ವರ್ಷದ ಮಹಿಳೆಗೆ (ಪಿ-52834) ಪಾಸಿಟಿವ್‌ ಬಂದಿದೆ.

ರಾಣೆಬೆನ್ನೂರಿನ 20 ವರ್ಷದ ಯುವಕ (ಪಿ-52840), 30 ವರ್ಷದ ಮಹಿಳೆ (ಪಿ-52845), 19 ವರ್ಷದ ಯುವಕ (ಪಿ-52850), 35 ವರ್ಷದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ (ಪಿ-52858), 21 ವರ್ಷದ ಯುವಕ (ಪಿ-52865), 9 ವರ್ಷದ ಬಾಲಕಿ (ಪಿ-52870), 33 ವರ್ಷದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ(ಪಿ-52873), 41 ವರ್ಷದ ಮಹಿಳೆ (52882), 37 ವರ್ಷದ ಪುರುಷ (ಪಿ-52893), 23 ವರ್ಷದ ಯುವತಿ(ಪಿ-52899), 27 ವರ್ಷದ ಪುರುಷ(ಪಿ-52909), 40 ವರ್ಷದ ಮಹಿಳೆ(ಪಿ-52914), 26 ವರ್ಷದ ಮಹಿಳೆ(ಪಿ-52919), 10 ವರ್ಷದ ಬಾಲಕ (ಪಿ-52925), 10 ವರ್ಷದ ಬಾಲಕ (ಪಿ-52929), 40 ವರ್ಷದ ಪುರುಷ (ಪಿ-52933) ಸೋಂಕಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT