ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಯಲ್ಲಿ ‘ಕ್ರಿಂ’ ಯೋಜನೆ ಜಾರಿ

Last Updated 25 ಜನವರಿ 2021, 12:44 IST
ಅಕ್ಷರ ಗಾತ್ರ

ಹಾವೇರಿ: ಡಾನ್‌ ಬೋಸ್ಕೊ ಸಂಸ್ಥೆಯು ‘ಮಕ್ಕಳ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಆಂದೋಲನ’ದ (CREAM) 3ನೇ ಹಂತದ ಯೋಜನೆಯ ಚಟುವಟಿಕೆಗಳನ್ನು ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಆಯ್ದ 20 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ ಎಂದು ಸಂಸ್ಥೆಯ ಸಂಯೋಜಕ ಮಂಜಪ್ಪ ಬಿ. ತಿಳಿಸಿದರು.

2020–21ರಿಂದ ಹಾವೇರಿ ಜಿಲ್ಲೆಯಲ್ಲಿಯೂ ಕೂಡ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯಲು ಸಂಸ್ಥೆಯು ಸೇವೆಯನ್ನು ಪ್ರಾರಂಭಿಸಿದೆ. ಜಿಲ್ಲೆಯಲ್ಲಿ ಇಟ್ಟಂಗಿಭಟ್ಟಿ, ಗ್ಯಾರೇಜ್‌, ಹೋಟೆಲ್‌, ಹೊಲದ ಕೆಲಸ ಮುಂತಾದ ಕೆಲಸಗಳಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಬಾಲ್ಯವಿವಾಹಗಳು ಕೂಡ ಹೆಚ್ಚಾಗಿ ನಡೆಯುತ್ತಿವೆ. ಅಂಗವಿಕಲ ಮಕ್ಕಳು, ಪೋಷಕರಹಿತ ಮಕ್ಕಳು, ಏಕ ಪೋಷಕ ಮಕ್ಕಳು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದಾರೆ ಎಂದು ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಕ್ಕಳು ಹಕ್ಕುಗಳು, ಮಕ್ಕಳಿಗಾಗಿ ಇರುವ ಕಾನೂನುಗಳು ಮತ್ತು ಕಾರ್ಯಕ್ರಮಗಳ ಕುರಿತು ಸಮುದಾಯದ ಜನರಿಗೆ ಮಾಹಿತಿಯ ಅಗತ್ಯವಿದೆ. ಮಕ್ಕಳ ಪರವಾಗಿ ಕೆಲಸ ಮಾಡಬೇಕಾದ ವಿವಿಧ ಇಲಾಖೆಗಳ ಗಮನವನ್ನು ಮಕ್ಕಳ ಹಿತದೃಷ್ಟಿಯ ಕಡೆಗೆ ಸೆಳೆಯಬೇಕಾದ ಅವಶ್ಯ ಕಂಡು ಬಂದಿದೆ. ತರಬೇತಿ, ಕಾರ್ಯಾಗಾರ, ಸಂವಾದ, ಸತ್ಯಶೋಧನೆ, ಹಕ್ಕೊತ್ತಾಯ, ಸಮಾವೇಶ ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಡಾನ್‌ ಬೋಸ್ಕೊ ಸಂಸ್ಥೆಯು ‘ಕ್ರೀಂ’ ಯೋಜನೆಯನ್ನು ಜಾರಿಗೊಳಿಸಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎ.ಟಿ. ವಸಂತಕುಮಾರ್‌, ಪ್ರಶಾಂತ್‌ ಬಳ್ಳೊಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT