ಬಂಕಾಪುರದಲ್ಲಿ ಡಿ.ಜೆ ಬಳಕೆ: ದೂರು ದಾಖಲು

7

ಬಂಕಾಪುರದಲ್ಲಿ ಡಿ.ಜೆ ಬಳಕೆ: ದೂರು ದಾಖಲು

Published:
Updated:

ಹಾವೇರಿ: ಅಧಿಕ ಶಬ್ದ ಹೊಮ್ಮಿಸುವ ಧ್ವನಿವರ್ಧಕ (ಡಿ.ಜೆ) ಬಳಕೆ ನಿಷೇಧವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಂಕಾಪುರದ ಹಿಂದು ಮಹಾಗಣಪತಿ ಸೇವಾ ಸಮಿತಿ ಹಾಗೂ ಇತರರ ಮೇಲೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ತಿಳಿಸಿದ್ದಾರೆ.

ಬಂಕಾಪುರದಲ್ಲಿ ಸೆಪ್ಟೆಂಬರ್ 13ರಂದು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ವಿಸರ್ಜನೆಯು ಅ.3ರಂದು ನಡೆದಿತ್ತು. ಡಿ.ಜೆ. ಬಳಸದಂತೆ ಜಿಲ್ಲಾಧಿಕಾರಿಗಳ ಆದೇಶ ಹಾಗೂ ಕರ್ನಾಟಕ ಪೊಲೀಸ್ ಅಧಿನಿಯಮದ ಅನ್ವಯ ಮನವರಿಕೆ ಮಾಡಿಕೊಡಲಾಗಿತ್ತು. ಬಳಿಕ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ‌ಆದರೂ, ನಂಬರ್‌ ಪ್ಲೇಟ್ ಇಲ್ಲದ ಟ್ರ್ಯಾಕ್ಟರ್ ಹಾಗೂ ಟೇಲರ್‌ನಲ್ಲಿ ಡಿಜೆ ಹಾಕಿ, ಸಾರ್ವಜನಿಕರಿಗೆ ತೊಂದರೆ ಹಾಗೂ ಕಾನೂನು ಉಲ್ಲಂಘಿಸಿದ ಕಾರಣ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !