ಶುಕ್ರವಾರ, ಜುಲೈ 30, 2021
27 °C

ಹಾವೇರಿ: ಕಸ ವಿಲೇವಾರಿ ಟ್ರಾಕ್ಟರ್‌ ಓಡಿಸಿದ ಆರೋಗ್ಯ ನಿರೀಕ್ಷಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಚಾಲಕರ ಕೊರತೆಯಿಂದ ನಗರಸಭೆಯ ಕಸ ವಿಲೇವಾರಿ ಟ್ರಾಕ್ಟರ್‌ ಅನ್ನು ಪ್ರಭಾರ ಆರೋಗ್ಯ ನಿರೀಕ್ಷಕರೇ ನಗರದಲ್ಲಿ ಗುರುವಾರ ಚಾಲನೆ ಮಾಡಿದ್ದಾರೆ. 

‘ನಗರಸಭೆಯ 91 ಪೌರಕಾರ್ಮಿಕರಲ್ಲಿ 70 ಮಂದಿಗೆ ಈಚೆಗೆ ನೇರ ವೇತನ ಪಾವತಿ ಸೌಲಭ್ಯ ದೊರೆಯಿತು. ಉಳಿದ 21 ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಹೀಗಾಗಿ ಚಾಲಕರ ಕೊರತೆ ಕಾಡುತ್ತಿದೆ. ನಗರದ ಮುಖ್ಯರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ ಹರಡಿತ್ತು. ಆದ ಕಾರಣ ನಾನೇ ಟ್ರಾಕ್ಟರ್‌ ಚಾಲನೆ ಮಾಡಿ ಕಸ ವಿಲೇವಾರಿ ಮಾಡಿದೆ’ ಎಂದು ಪ್ರಭಾರ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ತಿಳಿಸಿದರು. 

ನಗರದ ಹಳೇ ಪಿ.ಬಿ.ರಸ್ತೆ, ಜೆ.ಎಚ್‌.ಪಟೇಲ್‌ ಸರ್ಕಲ್‌ನಿಂದ ಕೆ.ಎಲ್‌.ಇ. ಸ್ಕೂಲ್‌ ವರೆಗೆ ಟ್ರಾಕ್ಟರ್‌ ಚಾಲನೆ ಮಾಡಿ ಕಸ ವಿಲೇವಾರಿಗೆ ನೆರವಾಗಿದ್ದಾರೆ. ಇವರ ಸೇವಾ ಕಾರ್ಯಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು