ಮಂಗಳವಾರ, ಜನವರಿ 18, 2022
27 °C
ಹೊಸ ಎಲೆಕ್ಟ್ರಿಕಲ್‌ ಪ್ಯಾನಲ್ ಅಳವಡಿಕೆ

ಹಾವೇರಿ | ‘ಪ್ರಜಾವಾಣಿ’ ವರದಿಗೆ ಸ್ಪಂದಿಸಿದ ಡಿಸಿ; ಆಪರೇಷನ್ ಥಿಯೇಟರ್ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ (ಎಂಸಿಎಚ್‌) ಹೊಸ ಎಲೆಕ್ಟ್ರಿಕಲ್‌ ಪ್ಯಾನಲ್‌ ಅಳವಡಿಸಲಾಗಿದೆ. ಜತೆಗೆ ವೈರಿಂಗ್‌ ಮತ್ತು ಎಲೆಕ್ಟ್ರಿಕಲ್‌ ಉಪಕರಣಗಳನ್ನು ದುರಸ್ತಿ ಮಾಡಿ, ಆಪರೇಷನ್‌ ಥಿಯೇಟರ್‌ ಅನ್ನು ಮತ್ತೆ ಆರಂಭಿಸಲಾಗಿದೆ. 

‘ಕೋವಿಡ್‌ ಉಲ್ಬಣವಾದರೆ ಸಿಸೇರಿಯನ್‌ಗೂ ಕುತ್ತು!’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಡಿ.9ರಂದು ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿಯಲ್ಲಿ 78 ದಿನ ಕಳೆದರೂ ರಿಪೇರಿಯಾಗದ ಎಲೆಕ್ಟ್ರಿಕಲ್‌ ಪ್ಯಾನಲ್‌ನಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ ಬಂದ್‌ ಆದ ಬಗ್ಗೆ ಹಾಗೂ ಗರ್ಭಿಣಿಯರ ಸ್ಥಳಾಂತರ ಸಮಸ್ಯೆ ಬಗ್ಗೆ ಸವಿಸ್ತಾರವಾಗಿ ಬೆಳಕು ಚೆಲ್ಲಲಾಗಿತ್ತು. 

ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಸುಮಾರು ₹28 ಲಕ್ಷ ವೆಚ್ಚದಲ್ಲಿ ಹೊಸ ಎಲೆಕ್ಟ್ರಿಕಲ್‌ ಪ್ಯಾನಲ್‌, ವೈರಿಂಗ್‌, ಉಪಕರಣಗಳನ್ನು ದುರಸ್ತಿ ಮಾಡಿಸಿ, ಆಪರೇಷನ್‌ ಥಿಯೇಟರ್‌ ಪುನರಾರಂಭಕ್ಕೆ ಕ್ರಮ ಕೈಗೊಂಡಿದ್ದಾರೆ.  

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 2021ರ ಸೆ.21ರಂದು ಬೆಳಿಗ್ಗೆ 7 ಗಂಟೆಗೆ ಎಲೆಕ್ಟ್ರಿಕಲ್‌ ಪ್ಯಾನಲ್‌ ಸುಟ್ಟು ಹೋಗಿ, ಬೆಂಕಿ ಆವರಿಸಿಕೊಂಡ ಘಟನೆ ನಡೆದಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.