ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡ್ನಿ ವೈಫಲ್ಯ: ನೆರವಿಗಾಗಿ ಮನವಿ

Last Updated 27 ಜೂನ್ 2022, 15:06 IST
ಅಕ್ಷರ ಗಾತ್ರ

ಕುಮಾರಪಟ್ಟಣ: ರಾಣೆಬೆನ್ನೂರು ತಾಲ್ಲೂಕಿನ ಮಲಕನಹಳ್ಳಿ ಗ್ರಾಮದ ಬಡ ರೈತ ಬೀರಪ್ಪ ರಾಮಪ್ಪ ಮಾಳಗೇರ ಕಳೆದ ಒಂದು ವರ್ಷದಿಂದ ಎರಡೂ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದಾರೆ.

ದಾವಣಗೆರೆ ಚಿಗಟೇರಿ ಆಸ್ಪತ್ರೆಯ ವೈದ್ಯರು ತಪಾಸಣೆ ಬಳಿಕ ಎರಡೂ ಕಿಡ್ನಿಗಳು ವೈಫಲ್ಯಗೊಂಡಿರುವುದು ತಿಳಿದಿದೆ. ವೈದ್ಯರು ಡಯಾಲಿಸಿಸ್‌ಗೆ ಶಿಫಾರಸು ಮಾಡಿದ್ದರು. ಈ ನಡುವೆ ಹೃದಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಸ್ತುತ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಪ್ರತಿ ಹದಿನೈದು ದಿನಗಳಿಗೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಸಾಲ ಮಾಡಿ ತಂದ ಹಣವೆಲ್ಲವೂ ಖರ್ಚಾಗಿದೆ. ಪ್ರವಾಹಕ್ಕೆ ತುತ್ತಾಗಿ ಇರುವ ಒಂದು ಎಕರೆ ಬೆಳೆ ಕೂಡ ನಾಶವಾಗಿ ಜಾಲಿ ಬೆಳೆದಿದೆ. ರೋಗ ವಾಸಿಯಾಗದೇ ಸಾಲ ಬೆಟ್ಟದಷ್ಟು ಬೆಳೆಯುತ್ತಿದೆ’ ಎಂದು ತಾಯಿ ರೇಣುಕಮ್ಮ ಕಂಬನಿ ತುಂಬಿಕೊಂಡರು.

ವೈದ್ಯರು ಮಗನಿಗೆ ತಾಯಿಯ ಕಿಡ್ನಿ ಹೊಂದಾಣಿಕೆ ಆಗಲಿದೆ ಎಂದು ಹೇಳಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುವ ಅವರಿಗೆ ಕಿಡ್ನಿ ಜೋಡಿಸಲು ₹6-7 ಲಕ್ಷ ಖರ್ಚಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ‍ಕಿಡ್ನಿ ಜೋಡಿಸಲು ಹಣ ಹೊಂದಿಸಲಾಗದೆ ಬೀರಪ್ಪನ ಕುಟುಂಬ ಅಸಹಾಯಕ ಸ್ಥಿತಿಯಲ್ಲಿದೆ. ಏನಾದರೂ ಮಾಡಿ ಮನೆಯ ಮಗನನ್ನು ಬದುಕಿಸಿಕೊಳ್ಳಬೇಕು ಎಂದು ಬೀರಪ್ಪನ ಕುಟುಂಬ ಜನರ ಸಹಾಯಕ್ಕಾಗಿ ಅಂಗಲಾಚುತ್ತಿದೆ.

ಸಹಾಯ ಮಾಡಲು ಇಚ್ಛಿಸುವವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಾಕನೂರು ಶಾಖೆ ಬೀರಪ್ಪನ ಬ್ಯಾಂಕ್ ಖಾತೆ ಸಂಖ್ಯೆ A/C 520291023121297, IFSC UBIN0904059 ಕ್ಕೆ ಹಣ ಸಂದಾಯ ಮಾಡಬಹುದು. ಮಾಹಿತಿಗಾಗಿ ಮೊ. 7760632794 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT