ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಜೆಎಂ ಯೋಜನೆ ಬಿಜೆಪಿ ಕೊಡುಗೆ: ಜೋಶಿ

ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ
Published 3 ಏಪ್ರಿಲ್ 2024, 15:07 IST
Last Updated 3 ಏಪ್ರಿಲ್ 2024, 15:07 IST
ಅಕ್ಷರ ಗಾತ್ರ

ತಡಸ(ಕೋಣನಕೇರಿ): ‘ಕಳೆದ 25 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ಜನರ ಭಾವನೆಗಳಿಗೆ ಬೆಲೆ ಕೊಡುವ ಒಬ್ಬ ಸಾಮಾನ್ಯ ಸಂಸದ ನಾನು’ ಎಂದು ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಹೇಳಿದರು.

ಕೋಣನಕೇರಿ ಗ್ರಾಮದಲ್ಲಿ ದುಂಡಶಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ₹5 ಲಕ್ಷ ಕೋಟಿಯಲ್ಲಿ ಜೆಜೆಎಂ ಯೋಜನೆ ಪ್ರಗತಿಯಲ್ಲಿದೆ. ನೀರಿನ ಅಭಾವವನ್ನ ನೀಗಿಸುವ ಮೋದಿಯವರ ಪರಿಲಕ್ಪನೆಯಿಂದ ಇದು ಸಾದ್ಯವಾಗಿದೆ ಎಂದರು.

ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 39 ರಸ್ತೆಗಳನ್ನು ಅಭಿವೃದ್ದಿ ಮಾಡಲಾಗಿದೆ. ದೇಶದಲ್ಲಿ ಬದಲಾವಣೆಯಾಗುತ್ತಿದೆ. ಆರ್ಥಿಕತೆಯಲ್ಲಿ ದುರ್ಬಲ ದೇಶ ಭಾರತ ಎಂದು ಹೇಳಲಾಗುತ್ತಿತ್ತು. ಆದರೆ ಆರ್ಥಿಕತೆಯಲ್ಲಿ ಇಂದು ಬಾರತ ವಿಶ್ವದಲ್ಲಿಯೇ 5ನೇ ಸ್ಥಾನದಲ್ಲಿದೆ ಎಂದರು.

ಬಳಿಕ ಮಾತನಾಡಿದ ಶಶಿಧರ ಯಲಿಗಾರ, ನಾನು ವಿಧಾನಸಭಾ ಚುನಾವಣೆಯಲ್ಲಿ 14 ಸಾವಿರ ಮತಗಳನ್ನು ಪಡೆದಿದ್ದು, ಇದನ್ನು ಸೇರಿಸಿ 60 ಸಾವಿರ ಮತಗಳ ಅಂತರದಿಂದ ಜೋಶಿಯವರನ್ನ ಮತ್ತೋಮ್ಮೆ ಗೆಲ್ಲಿಸಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಪಣ ತೊಟ್ಟಿದ್ದೇನೆ. ಪಾಕಿಸ್ತಾನದವರೇ ಹೇಳುತ್ತಿದ್ದಾರೆ ಮೋದಿಯವರನ್ನ ಕಳೆದುಕೊಳ್ಳಬೇಡಿ ಎಂದು, ಮಾತೃಪಕ್ಷಕ್ಕೆ ಮರಳಿ ಬಂದಿದ್ದೇನೆ. ಕೈಲಾದ ಸೇವೆ ಮಾಡುತ್ತೇನೆ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅದ್ಯಕ್ಷ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡ್ರ, ಮಹಿಳಾ ಮುಖಂಡರಾದ ವೀಣಾ ಹಿರೇಮಠ ಮಾತನಾಡಿದರು.

ಈ ಸಂದರ್ಭದಲ್ಲಿ ತಿಪ್ಪಣ್ಣ ಸಾತಣ್ಣವರ, ಶೋಭಾ ನಿಸ್ಸಿಮಗೌಡ್ರ, ಸುಭಾಸ್ ಚೌಹಾಣ್, ಮಲ್ಲೇಶಪ್ಪ ಹರಿಜನ, ಕೊಣನಕೇರಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ನಾರಾಯಣಪೂರ, ಕುಮಾರ ಮಾಸನಕಟ್ಟಿ, ಬಸವಣ್ಣೇವ್ವ ಶಿಗ್ಗಾವಿ, ಹನುಮವ್ವ ದೇವಗಿರಿ, ಹನುಮಂತಪ್ಪ ತೆಮ್ಮಿನಕೊಪ್ಪ, ಚನ್ನಪ್ಪ ಬಿಂದ್ಲಿ, ರಾಜಣ್ಣ ಕಾಮನಹಳ್ಳಿ, ಪರಶುರಾಮ ಹಿರೇಮಠ ಇದ್ದರು.

ಕೋಣನಕೇರಿ ಗ್ರಾಮದಲ್ಲಿ ದುಂಡಶಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆ ಯನ್ನು ಪ್ರಲ್ಹಾದ ಜೋಶಿ ಉದ್ಘಾಟಿಸಿದರು
ಕೋಣನಕೇರಿ ಗ್ರಾಮದಲ್ಲಿ ದುಂಡಶಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆ ಯನ್ನು ಪ್ರಲ್ಹಾದ ಜೋಶಿ ಉದ್ಘಾಟಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT