ಹಾನಗಲ್: ತಾಲ್ಲೂಕಿನ ಕೆಲವರಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ₹1.30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಕರೆಕ್ಯಾತನಹಳ್ಳಿ ಗ್ರಾಮದಲ್ಲಿ ₹55 ಲಕ್ಷ, ಬ್ಯಾತನಾಳ ಗ್ರಾಮದಲ್ಲಿ ₹30 ಲಕ್ಷ, ಮಾಳಾಪುರ ಗ್ರಾಮದಲ್ಲಿ ₹30 ಲಕ್ಷ, ಕೆಲವರಕೊಪ್ಪ ಗ್ರಾಮದಲ್ಲಿ ₹15 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಸಿ.ಸಿ ರಸ್ತೆ, ಸಿಡಿ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ‘ತಾಲ್ಲೂಕಿನ ಜೀವನಾಡಿ ಧರ್ಮಾ ಜಲಾಶಯದ ಕಾಲುವೆ ಹೂಳೆತ್ತುವ ಕಾಮಗಾರಿಗೆ ₹50 ಕೋಟಿ ವೆಚ್ಚದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಕಾಲುವೆ ಹೂಳು ತುಂಬಿದ್ದರಿಂದ ಅಚ್ಚುಕಟ್ಟು ಪ್ರದೇಶದ ಕೆರೆಕಟ್ಟೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಕಾರಣ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ತಾಲ್ಲೂಕಿನ ರಸ್ತೆಗಳ ಸುಧಾರಣೆಗೂ ₹50 ಕೋಟಿ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲ ಕಾನಮನಿ, ಸದಸ್ಯರಾದ ಬಸವರಾಜ ಮಾಳಣ್ಣನವರ, ಸಿದ್ದು ವಡ್ಡರ, ಶಾಂತಪ್ಪ ಬಡಣ್ಣನವರ, ಶಿವಾಜೆಪ್ಪ ಬೆಳ್ಳಿಕಟ್ಟಿ, ಬಸವರಾಜ ಕಾನಮನಿ, ಲೋಕೇಶ ಅಗಸಿಬಾಗಿಲ, ಪರಮೇಶ ಶಿಗಡಿ, ವಾಮೇಶ ಲಮಾಣಿ, ಬಸವಂತ ನಾಯ್ಕ, ಕಾಂತಪ್ಪ ಲಮಾಣಿ, ಭೀಮಣ್ಣ ಲಮಾಣಿ, ಬಂಗಾರೆಪ್ಪ ಕಲಕೇರಿ, ನಾಗರಾಜ ವಡ್ಡರ, ವೀರಭದ್ರಪ್ಪ ಕೋಳೂರ, ನಾಗಪ್ಪ ಪೂಜಾರ, ಮಹರುದ್ರಪ್ಪ ಮಾಳಣ್ಣನವರ, ಗುಡ್ಡಪ್ಪ ತಿಳವಳ್ಳಿ, ಬಸವರಾಜ ಮತ್ತಿಹಳ್ಳಿ, ನಾಗರಾಜ ಈಳಿಗೇರ, ವೆಂಕಟೇಶ ಅಗಸಿಬಾಗಿಲ, ಕೃಷ್ಣ ಮಡ್ಲೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.