ಬುಧವಾರ, ಜನವರಿ 20, 2021
16 °C

ಜಿಲ್ಲಾಡಳಿತ ಭವನಕ್ಕೆ ಹೊಸ ಲಿಫ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ದೇವಗಿರಿ ಗುಡ್ಡದ ಜಿಲ್ಲಾಡಳಿತ ಭವನದಲ್ಲಿ ಕೆಟ್ಟು ಹೋಗಿದ್ದ ಲಿಫ್ಟ್‌ ಅನ್ನು ₹3 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಿಸುವ ಜತೆಗೆ ₹12 ಲಕ್ಷ ವೆಚ್ಚದಲ್ಲಿ ಹೊಸ ಲಿಫ್ಟ್‌ ಅನ್ನು ಅಳವಡಿಸಲಾಗಿದೆ.

ಜಿಲ್ಲಾಡಳಿತ ಭವನದಲ್ಲಿ ಲಿಫ್ಟ್‌ ಸೌಲಭ್ಯವಿಲ್ಲದ ಕಾರಣ ಕಚೇರಿಗಳ ಕೆಲಸಕ್ಕೆ ಬರುತ್ತಿದ್ದ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲರಿಗೆ ತೀವ್ರ ತೊಂದರೆಯಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸೆಪ್ಟೆಂಬರ್‌ 11ರಂದು ‘ಕೆಟ್ಟುನಿಂತ ಲಿಫ್ಟ್‌: ಅಂಗವಿಕಲರ ಪರದಾಟ’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು. 

ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು, ಸರ್ಕಾರದಿಂದ ಯಾವುದೇ ಅನುದಾನ ಬರುವುದಿಲ್ಲ. ಹಾಗಾಗಿ ಕಟ್ಟಡಗಳ ನಿರ್ವಹಣೆಯ ಅನುದಾನದಲ್ಲೇ ಸ್ವಲ್ಪ ಹಣವನ್ನು ಉಳಿತಾಯ ಮಾಡಿ ಶೀಘ್ರ ಲಿಫ್ಟ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದರು. ಅದೇ ರೀತಿ ಹೊಸ ಲಿಫ್ಟ್‌ ಸೌಲಭ್ಯವನ್ನು ಕಲ್ಪಿಸಿರುವುದು ಕಚೇರಿಯ ಸಿಬ್ಬಂದಿ ಮತ್ತು ಜನರಿಗೆ ಸಂತಸ ನೀಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು