ಸೋಮವಾರ, ಮೇ 23, 2022
24 °C

ಒಮಿನಿ ಪಲ್ಟಿ: 2 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ (ಹಾವೇರಿ ಜಿಲ್ಲೆ): ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದ ಬಳಿ ಶಿರಸಿ–ಮೊಣಕಾಲ್ಮೂರು ಹೆದ್ದಾರಿಯಲ್ಲಿ ಭಾನುವಾರ ಒಮಿನಿ ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದು, ಆರು ಜನ ಗಾಯಗೊಂಡಿದ್ದಾರೆ.

ಹಾನಗಲ್ ತಾಲ್ಲೂಕಿನ ಯಳವಟ್ಟಿಯ ನೀಲವ್ವ ಶಂಕ್ರಪ್ಪ ಎಲಿಗಾರ (85), ಶಿಗ್ಗಾಂವಿಯ ನೀಲಕಂಠಪ್ಪ ಶಿವಪ್ಪ ಎಲಿಗಾರ (55)  ಸಾವಿಗೀಡಾದರು.

ಬಸವಣ್ಣೆವ್ವ ನೀಲಕಂಠಪ್ಪ ಎಲಿಗಾರ, ಕವಿತಾ ಮಲ್ಲಿಕಾರ್ಜುನ ವರ್ದಿ, ನಾಗವೇಣಿ ಸಂಗಮೇಶ ವರ್ದಿ, ಸುಭಾಷ್ ಚನ್ನಬಸಪ್ಪ ಮನ್ನಂಗಿ, ಮಕ್ಕಳಾದ ಸಮರ್ಥ ಮಲ್ಲಿಕಾರ್ಜುನ ವರ್ದಿ ಮತ್ತು ಶ್ರೇಯಾ ಸಂಗಮೇಶ ವರ್ದಿ ಗಾಯಗೊಂಡಿದ್ದಾರೆ. ಇವರಿಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸಂಬಂಧಿಕರ ವಿವಾಹ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ಯಳವಟ್ಟಿಯಿಂದ ಅಕ್ಕಿಆಲೂರ ಮಾರ್ಗವಾಗಿ ಸೋಮಾಪುರಕ್ಕೆ ತೆರಳುತ್ತಿದ್ದರು. ಒಮಿನಿ ಭಾಗಶಃ ನಜ್ಜುಗುಜ್ಜಾಗಿದೆ. ಪೊಲೀಸರು ಮತ್ತು ಸ್ಥಳೀಯರು ಮಾನವೀಯತೆ ಮೆರೆದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.