ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಸೂರಿನಲ್ಲಿ ನರೇಗಾ ಯೋಜನೆಯಿಂದ ಮೆರುಗು; ಸರ್ವಜ್ಞನ ಐಕ್ಯ ಸ್ಥಳಕ್ಕೆ ಜೀವ ಕಳೆ

Published 28 ಮೇ 2024, 6:20 IST
Last Updated 28 ಮೇ 2024, 6:20 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಗ್ರಾಮೀಣ ಭಾಗದ ಜನರಿಗೆ ನಿರಂತರವಾಗಿ ಉದ್ಯೋಗ ನೀಡುವ ನರೇಗಾ ಯೋಜನೆ ತಾಲ್ಲೂಕಿನ ಮಾಸೂರು ಗ್ರಾಮದಲ್ಲಿ ಸಾಕಾರಗೊಂಡಿದೆ. ಮಾಸೂರಿನಲ್ಲಿ ಹರಿದು ಹೋಗಿರುವ ಕುಮದ್ವತಿ ನದಿ ಪುನಶ್ಚೇತನ ಕಾಮಗಾರಿಯನ್ನು 2024-25ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗಿದ್ದು, ನದಿ ಹಾಗೂ ತ್ರಿಪದಿಬ್ರಹ್ಮ ಸರ್ವಜ್ಞನ ಐಕ್ಯ ಸ್ಥಳಕ್ಕೆ ಜೀವ ಕಳೆ ಬಂದಂತಾಗಿದೆ.

ಹಲವಾರು ಶತಮಾನಗಳಿಂದ ಮಾಸೂರಿನಲ್ಲಿ ಹರಿದು ಹೋಗಿರುವ ಕುಮದ್ವತಿ ನದಿಯ ಅಭಿವೃದ್ಧಿ ಇದೇ ಮೊದಲ ಬಾರಿಗೆ ನರೇಗಾ ಯೋಜನೆಯಡಿ ನಡೆಯುತ್ತಿದೆ. ಪ್ರತಿನಿತ್ಯ ಗ್ರಾಮದ 90ಕ್ಕೂ ಹೆಚ್ಚು ನರೇಗಾ ಕಾರ್ಮಿಕರು ನದಿ ಪಾತ್ರದಲ್ಲಿಯ ಗಿಡ-ಗಂಟೆಗಳನ್ನು ತೆರವುಗೊಳಿಸುವುದರ ಜತೆಗೆ ಹೂಳನ್ನೆತ್ತಿ ನದಿಯ ದಡಕ್ಕೆ ಹಾಕಿದ್ದಾರೆ. 850ಕ್ಕೂ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿ ₹2.5ಲಕ್ಷಕ್ಕೂ ಹೆಚ್ಚು ಕೂಲಿ ಹಣವನ್ನು ಕಾರ್ಮಿಕರಿಗೆ ಸಂದಾಯ ಮಾಡಲಾಗಿದೆ. ಇದರಿಂದ ಗ್ರಾಮದ ಜನರಿಗೆ ಬರಗಾಲ ಹಾಗೂ ಬೇಸಿಗೆಯ ಸಂದರ್ಭದಲ್ಲಿ ನಿರಂತರ ಉದ್ಯೋಗ ನೀಡಿ, ವಲಸೆ ಹೋಗುವುದನ್ನು ತಪ್ಪಿಸಲಾಗಿದೆ.

ಕಾಮಗಾರಿ ಅನುಷ್ಠಾನದಿಂದಾಗಿ ಕಲುಷಿತ ನೀರಿನಿಂದ ಕೊಳಚೆ ಪ್ರದೇಶದಂತೆ ಕಂಡು ಬರುತ್ತಿದ್ದ ನದಿಗೆ ಇದೀಗ ಜೀವ ಕಳೆ ಬಂದಂತಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನದಿಯ ಒಡಲು ನಳನಳಿಸುತ್ತಿದೆ. ಪ್ರವಾಸಿಗರು ಹಾಗೂ ಗ್ರಾಮದ ಜನತೆಯನ್ನು ಕೈ ಬೀಸಿ ಕರೆಯುತ್ತಿದೆ. ಮಳೆಗಾಲದಲ್ಲಿ ಪ್ರವಾಹ ಬಂದ ವೇಳೆ ನದಿ ನೀರು ಅಕ್ಕಪಕ್ಕದ ಜಮೀನಿಗೆ ನುಗ್ಗುವುದನ್ನು ತಡೆಯಲು ಪುನಶ್ಚೇತನ ಕಾಮಗಾರಿ ಸಹಕಾರಿಯಾಗಿದೆ.

ಸುಂದರಗೊಂಡ ಸರ್ವಜ್ಞ ಐಕ್ಯ ಮಂಟಪ: ವರಕವಿ ಸರ್ವಜ್ಞ ಐಕ್ಯಸ್ಥಳ ಹಾಗೂ ಪಕ್ಕದ ಕಾಶಿ ವಿಶ್ವನಾಥ ದೇವಾಲಯದ ಸುತ್ತಮುತ್ತ ಹಾಗೂ ಕೋಟೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ. ನದಿಯ ಒಡಲು ಸರ್ವಜ್ಞನ ಐಕ್ಯ ಸ್ಥಳ ಸ್ವಚ್ಛ ಸುಂದರವಾಗಿ ಕಣಿಸುತ್ತಿದೆ. ಒಟ್ಟಿನಲ್ಲಿ ವಲಸೆಯನ್ನು ತಪ್ಪಿಸಿ ಗ್ರಾಮದ ಜನರಿಗೆ ಸುಸ್ಥಿರ ಬದುಕನ್ನು ಕಲ್ಪಿಸಿಕೊಡುವುದರ ಜತೆಗೆ ಜನರ ಜೀವನಾಡಿ ಕುಮದ್ವತಿ ನದಿ, ಸರ್ವಜ್ಞನ ಐಕ್ಯ ಸ್ಥಳ ಅಭಿವೃದ್ಧಿ ನಾಡಿನ ಗಮನ ಸೆಳೆದಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿದೆ.

ತಾಲ್ಲೂಕಿನೆಲ್ಲೆಡೆ ಜನ ಸಂರಕ್ಷಣೆ ಪರಿಸರ ಸಂರಕ್ಷಣೆಯ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಮಾಸೂರಿನಲ್ಲಿ ಕುಮದ್ವತಿ ನದಿಯ ಪುನಶ್ಚೇತನ ಕಾಮಗಾರಿ ಪ್ರಗತಿಯಲ್ಲಿದೆ. ಜನರಿಗೆ ನಿರಂತರ ಉದ್ಯೋಗ ನೀಡಿ ನದಿ ಪಾತ್ರವನ್ನು ಸುಂದರಗೊಳಿಸಲಾಗುವುದು ಎಂದು ರಟ್ಟೀಹಳ್ಳಿಯ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ ಹೇಳಿದರು.

ರಟ್ಟೀಹಳ್ಳಿ ತಾಲ್ಲೂಕು ಮಾಸೂರು ಗ್ರಾಮದ ಕುಮದ್ವತಿ ನದಿ ದಡದಲ್ಲಿರುವ ಸರ್ವಜ್ಞ ಐಕ್ಯ ಮಂಟಪ ಮತ್ತು ಕಾಶಿ ವಿಶ‍್ವನಾಥ ದೇವಾಲಯ ಪ್ರದೇಶವನ್ನು ನರೇಗಾ ಯೋಜನೆಯಡಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದು
ರಟ್ಟೀಹಳ್ಳಿ ತಾಲ್ಲೂಕು ಮಾಸೂರು ಗ್ರಾಮದ ಕುಮದ್ವತಿ ನದಿ ದಡದಲ್ಲಿರುವ ಸರ್ವಜ್ಞ ಐಕ್ಯ ಮಂಟಪ ಮತ್ತು ಕಾಶಿ ವಿಶ‍್ವನಾಥ ದೇವಾಲಯ ಪ್ರದೇಶವನ್ನು ನರೇಗಾ ಯೋಜನೆಯಡಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದು
ರಟ್ಟೀಹಳ್ಳಿ ತಾಲ್ಲೂಕು ಮಾಸೂರುಗ್ರಾಮದ ಕುಮದ್ವತಿ ನದಿ ದಡದಲ್ಲಿರುವ ಸರ್ವಜ್ಞ ಐಕ್ಯ ಮಂಟಪ ಮತ್ತು ಕಾಶಿ ವಿಶ‍್ವನಾಥ ದೇವಾಲಯ ಪ್ರದೇಶವನ್ನು ನರೇಗಾ ಯೋಜನೆಯಡಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದು.
ರಟ್ಟೀಹಳ್ಳಿ ತಾಲ್ಲೂಕು ಮಾಸೂರುಗ್ರಾಮದ ಕುಮದ್ವತಿ ನದಿ ದಡದಲ್ಲಿರುವ ಸರ್ವಜ್ಞ ಐಕ್ಯ ಮಂಟಪ ಮತ್ತು ಕಾಶಿ ವಿಶ‍್ವನಾಥ ದೇವಾಲಯ ಪ್ರದೇಶವನ್ನು ನರೇಗಾ ಯೋಜನೆಯಡಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದು.
ನಿತ್ಯ 90ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಂದ ಕಾಯಕ 850ಕ್ಕೂ ಹೆಚ್ಚು ಮಾನವ ದಿನಗಳನ್ನು ಸೃಜನೆ ನಿರಂತರ ಉದ್ಯೋಗದಿಂದ ತಪ್ಪದ ವಲಸೆ
ನರೇಗಾ ಯೋಜನೆಯಡಿ ಮಾಸೂರು ಗ್ರಾಮದಲ್ಲಿ ಕುಮದ್ವತಿ ನದಿ ಹಾಗೂ ಸರ್ವಜ್ಞನ ಐಕ್ಯ ಸ್ಥಳ ಅಭಿವೃದ್ಧಿಗೊಳಿಸಲಾಗಿದೆ
ಅಕ್ಷಯ ಶ್ರೀಧರ ಜಿ.ಪಂ. ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT