ಶುಕ್ರವಾರ, ಜೂನ್ 18, 2021
26 °C

ಕೃಷ್ಣ ವೇಷಧಾರಿಗಳ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಇಲ್ಲಿಯ ಹಾನಗಲ್‌ ರಸ್ತೆಯಲ್ಲಿರುವ ಗ್ರಾಮೀಣ ಪೊಲೀಸ್‌ ಠಾಣೆಯ ಬಡಾವಣೆಯಲ್ಲಿ ಜೀವನ ಜ್ಯೋತಿ ನಗರ ಮತ್ತು ಗ್ರಾಮೀಣ ಸಂಸ್ಥೆ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪುಟಾಣಿ ಕೃಷ್ಣ ವೇಷಧಾರಿಗಳ ಪ್ರದರ್ಶನ ನಡೆಯಿತು.

ವಸತಿ ಗೃಹದ ವಿವಿಧ ನೌಕರರ ಮಕ್ಕಳಾದ ಭಗತ್ ಮು. ಚಿಂದಿ, ಮನೋಜ ನಾ ಗೌರಮ್ಮನವರ, ಸ್ನೇಹಾ ಉ ತಳವಾರ, ಭಾರ್ಗವ ಮು ಚಿಂದಿ, ಹರ್ಷಿತಾ ಗು. ಉಮ್ಮಚಗಿ, ಲೋಕೇಶ ಉ. ತಳವಾರ, ಆದರ್ಶ ಗು. ಉಮ್ಮಚಗಿ, ಕಾರ್ತೀಕ ಸಾರಂಗಮಠ ಹಾಗೂ ತರೂಣ ಹೊಂಬಾಳ ಪುಟಾಣಿ ಕೃಷ್ಣರಾಗಿ ವೇದಿಕೆಯಲ್ಲಿ ಮಿಂಚಿದರು. 

ಸುಮತಿ ಚಿಂದಿ , ಸುಮಿತ್ರಾ ಮಲ್ಲಾಪೂರ, ರಮೇಶ ಗೂಡೂರ, ಉಮೇಶ ತಳವಾರ ಹಾಗೂ ಲಕ್ಷ್ಮಿ ಹೊಂಬಾಳೆ ಅತಿಥಿಗಳಾಗಿ ಆಗಮಿಸಿದ್ದರು. ಜೀವನ ಜ್ಯೋತಿ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ವರಿ ರವಿ ಸಾರಂಗಮಠ ಅಧ್ಯಕ್ಷತೆ ವಹಿಸಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.