ಉಪನ್ಯಾಸಕರನ್ನು ನಿಯೋಜಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

7

ಉಪನ್ಯಾಸಕರನ್ನು ನಿಯೋಜಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Published:
Updated:
Deccan Herald

ಸವಣೂರ : ಸರಕಾರಿ ಮಜೀದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರ ಕೊರತೆಯಿಂದ ವಿಧ್ಯಾರ್ಜನೆಗೆ ತೊಂದರೆಯಾಗುತ್ತಿರುವದನ್ನು ಖಂಡಿಸಿ ಸೋಮವಾರ ಆಡಳಿತ ಮಂಡಳಿಯ ಅಧ್ಯಕ್ಷ ರಾಜಶೇಖರ ಸಿಂದೂರ ಅವರ ನಿವೇಶನಕ್ಕೆ ತೆರಳಿ ಉಪನ್ಯಾಸಕರ ನಿಯೋಜನೆ ಮಾಡಿಸುವಂತೆ ಮನವಿ ಮಾಡಿಕೊಂಡರು.

ಪಟ್ಟಣದ ಶುಕ್ರವಾರ ಪೇಟೆಯ ಅಧ್ಯಕ್ಷರ ಮನೆಗೆ ವಿದ್ಯಾರ್ಥಿಗಳು ತೆರಳಿ ಮನವಿಯನ್ನು ಸಲ್ಲಿಸಿ ಮಾತನಾಡಿದರು, ಕಾಲೇಜ ಪ್ರಾರಂಭವಾಗಿ ಸುಮಾರು 2 ತಿಂಗಳು ಗತಿಸಿದರು ಕೂಡಾ ಅರ್ಥಶಾಸ್ತ್ರ, ಹಿಂದಿ, ರಾಜ್ಯಶಾಸ್ತ್ರ ಹಾಗೂ ಭೂಗೋಳಶಾಸ್ತ್ರ ಸೇರಿದಂತೆ ಹಲವಾರು ವಿಷಯಕ್ಕೆ ಸಮರ್ಪಕವಾಗಿ ಉಪನ್ಯಾಸಕರ ಕೊರತೆಯಿಂದ ಅಧ್ಯಯನಕ್ಕೆ ಹಿನ್ನಡೆಯನ್ನು ಅನುಭವಿಸುವಂತಾಗಿದೆ. ಈ ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಉಪನ್ಯಾಸಕರು ಕೂಡಾ ವರ್ಗಾವಣೆಗೊಂಡಿದ್ದರಿಂದ ವಿದ್ಯಾಲಯದಲ್ಲಿ ಆಡಳಿತ ನಿರ್ವಹಣೆ ಸಮರ್ಪಕವಾಗಿರುವದಿಲ್ಲ. 537 ವಿದ್ಯಾಥರ್ಿಗಳ ಹಾಜರಾತಿ ಇದ್ದಂತ ಮಹಾವಿದ್ಯಾಲಯದಲ್ಲಿ 14 ಉಪನ್ಯಾಸಕರು ಇರಬೇಕಿದ್ದರೆ, ಇಲ್ಲಿ ಕೇವಲ 7 ಉಪನ್ಯಾಸಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅತಿಥಿ ಶಿಕ್ಷಕರಾಗಿ 3 ಜನ ಹಾಗೂ ನಿಯೋಜನೆ ಆಧಾರದ ಮೇಲೆ 5 ಜನ ಇದ್ದು ವಾರದಲ್ಲಿ ಮೂರು ದಿನ ಮಾತ್ರ ಆಗಮಿಸುತ್ತಿರುವದರಿಂದ ನಿಗದಿತ ಅವಧಿಯಲ್ಲಿ ಪಠ್ಯಕ್ರಮದ ಬೋಧನೆ ನಡೆಯುತ್ತಿಲ್ಲ. ಸಮರ್ಪಕವಾಗಿ ತರಗತಿಗಳು ನಡೆಯಲು ಉಪನ್ಯಾಸಕರ ನಿಯೋಜನೆಗೆ ಕ್ರಮ ವಹಸಿಸಬೇಕು ಎಂದು ಮನವಿ ಮಾಡಿಕೊಂಡರು.

 ವಿದ್ಯಾರ್ಥಿಗಳು ಮನವಿ ಮಾಡಿಕೊಳ್ಳುತ್ತಿದ್ದಂತೆ ಸಿಂದೂರ ಮಾತನಾಡಿ ಈ ಕುರಿತಂತೆ ತಕ್ಷಣ ಸರಿಪಡಿಸಲು ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !