ಮಂಗಳವಾರ, ಡಿಸೆಂಬರ್ 1, 2020
18 °C

ಗೌರವಧನ ನೀಡಲು ಶಿಕ್ಷಕಿಯರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕರ್ನಾಟಕ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಶಿಕ್ಷಕಿಯರಿಗೆ ಮತ್ತು ಆಯಾಗಳಿಗೆ ಗೌರವಧನ ನೀಡುವಂತೆ ಒತ್ತಾಯಿಸಿ ಶಿಕ್ಷಕಿಯರು ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

2019-20ನೇ ಸಾಲಿನಲ್ಲಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಯನ್ನು ಪ್ರಾರಂಭ ಮಾಡಿದೆ. 2020-21ನೇ ಸಾಲಿಗೂ ಇದೇ ಶಿಕ್ಷಕಿಯರನ್ನು ಮುಂದುವರಿಸಲು ಆದೇಶ ನೀಡಿದೆ. 2020-21ನೇ ಸಾಲಿನ ಅನುದಾನ ಸಹ ಬಿಡುಗಡೆಯಾಗಿರುತ್ತದೆ. ಆದರೆ ಬಿಡುಗಡೆಯಾದ ಅನುದಾನವನ್ನು ಶಾಲೆಯ ಆರಂಭದ ನಂತರ ಗೌರವಧನ ನೀಡಲಾಗುವುದು ಎಂದು ಸರ್ಕಾರ ತಿಳಿಸಿರುವುದು ಬೇಸರ ತಂದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. 

ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗದೇ ಇರುವುದರಿಂದ 7-8 ತಿಂಗಳಿನಿಂದ ಗೌರವಧನ ಇಲ್ಲದೇ ಜೀವನ ನಿರ್ವಹಣೆ ಕಷ್ಟಕರವಾಗಿದೆ. ರಾಜ್ಯ ಸರ್ಕಾರ ಬಾಕಿ ಇರುವ ಗೌರವಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. 

ಶಿಕ್ಷಕಿಯರಾದ ಪ್ರಭಾವತಿ ಜಿ ಪಾಟೀಲ, ಲಕ್ಷ್ಮವ್ವ ಗಂಟೇರ, ರೇಣುಕಾ ಸಣ್ಣಬಮ್ಮಜಿ, ವಿಶಾಲಾಕ್ಷಿ ದಳವಾಯಿ, ಸಂಗೀತಾ ಬಡಿಗೇರ, ವೀಣಾ ಪುರದ, ನಂದಾ ರವದಿ, ಸುನೀತಾ ಕಾಗಿ, ರೇಖಾ ಅಂಗಡಿ, ಕುಬರಾಬಾನು ಬಾಸೂರ, ಕಾರ್ಮಿಕ ಮುಖಂಡರಾದ ವಿನಾಯಕ ಕುರುಬರ ಮುಂತಾದವರು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.