ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಟೆನಿಸ್ ವಾಲಿಬಾಲ್: ಹಾವೇರಿ ಬಾಲಕರಿಗೆ ಪ್ರಶಸ್ತಿ

ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೆನಿಸ್ ವಾಲಿಬಾಲ್: ದ.ಕ. ಬಾಲಕಿಯರಿಗೆ ಪ್ರಶಸ್ತಿ
Last Updated 22 ಅಕ್ಟೋಬರ್ 2018, 17:45 IST
ಅಕ್ಷರ ಗಾತ್ರ

ಹಾವೇರಿ:ಹಾನಗಲ್‌ನ ಅಂಜುಮನ್ ಶಾಲೆಯ ಹಮೀದ್‌ ಖಾನ್ ಹೊಂಡದ, ಅಫ್ರೋಜ್ ಅಹ್ಮದ್ ಮನ್ಸೂರ್ ಮತ್ತು ಜಾವೀದ್ ಖಾನ್ ಫಯಂ ಖಾನ್ ಆಕರ್ಷಕ ಆಟದ ನೆರವಿನಿಂದ ಆತಿಥೇಯ ಹಾವೇರಿ ಜಿಲ್ಲಾ ತಂಡವು ಸೋಮವಾರ ಇಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಟೆನಿಸ್ ವಾಲಿಬಾಲ್ ಟೂರ್ನಿಯ ಬಾಲಕರ ವಿಭಾಗದ ಪ್ರಶಸ್ತಿ ಜಯಿಸಿತು.

ಫೈನಲ್‌ ಪಂದ್ಯದ ಸಿಂಗಲ್ಸ್‌ನಲ್ಲಿ ಹಾವೇರಿಯ ಹಮೀದ್‌ ಖಾನ್ ಹೊಂಡದ 21–11, 21–14ರ ನೇರ ಸೆಟ್‌ಗಳಲ್ಲಿ ದಕ್ಷಿಣ ಕನ್ನಡದ ರಿತ್ವಿಕ್‌ ವಿರುದ್ಧ ಜಯ ಗಳಿಸಿದರು. ಡಬಲ್ಸ್‌ನಲ್ಲಿ ಹಾವೇರಿಯ ಅಫ್ರೋಜ್ ಮತ್ತು ಜಾವೀದ್ ಜೋಡಿಯು ದಕ್ಷಿಣ ಕನ್ನಡದ ರವಿರಾಜ್ ಮತ್ತು ವಿಜೇತ್ ವಿರುದ್ಧ 2–1 ಸೆಟ್‌ಗಳಲ್ಲಿ ರೋಚಕ ಜಯ ಸಾಧಿಸಿತು. ಮೊದಲೆರಡು ಸೆಟ್‌ಗಳು 21–18, 19–21ರಲ್ಲಿ ಸಮಬಲಗೊಂಡರೆ, ಮೂರನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಕಂಡುಬಂತು. ಕೊನೆಗೂ ಹಾವೇರಿಯ ಹುಡುಗರು 27–25ರಲ್ಲಿ ಗೆಲುವು ಕಂಡರು.

ಸೆಮಿಫೈನಲ್‌ನಲ್ಲಿ ಹಾವೇರಿಯು 2–0ಯಲ್ಲಿ ಮಂಡ್ಯ ಹಾಗೂ ದಕ್ಷಿಣ ಕನ್ನಡವು 2–0ಯಲ್ಲಿ ಬೆಳಗಾವಿಯನ್ನು ಮಣಿಸಿತ್ತು.

ಬಾಲಕಿಯರು:ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ ಉಜಿರೆಯ ಎಸ್‌ಡಿಎಂನ ಚಿತ್ರಾ, ಸ್ಪೂರ್ತಿ ಸಿ.ಎಸ್‌. ಮತ್ತು ತನುಶ್ರೀ ಪ್ರಶಸ್ತಿಗೆ ಮುತ್ತಿಕ್ಕಿದರು.

ಬೆಳಗಾವಿ ವಿರುದ್ಧದ ಫೈನಲ್‌ನ ಸಿಂಗಲ್ಸ್‌ನಲ್ಲಿ ದಕ್ಷಿಣ ಕನ್ನಡದ ಚಿತ್ರಾ 15–6, 15–7ರಲ್ಲಿ ಬೆಳಗಾವಿಯ ಶೀತಲ್ ವಿರುದ್ಧ ಜಯ ಗಳಿಸಿದರು. ಡಬಲ್ಸ್‌ನಲ್ಲಿ ಸ್ಪೂರ್ತಿ ಸಿ.ಎಸ್. ಮತ್ತು ತನುಶ್ರೀ ಬೆಳಗಾವಿಯ ಸೃಷ್ಟಿ ಮತ್ತು ಅಮಿತಾ ಎಸ್. ಜೋಡಿಯನ್ನು 15–8, 15–6 ರಲ್ಲಿ ಮಣಿಸಿತು. ಪಂದ್ಯವು ಬಹುತೇಕ ಏಕಮುಖವಾಗಿ ಸಾಗಿತ್ತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ದಕ್ಷಿಣ ಕನ್ನಡವು 2–0ಯಲ್ಲಿ ಬೆಂಗಳೂರು ದಕ್ಷಿಣ ಹಾಗೂ ಬೆಳಗಾವಿಯು 2–1ರಲ್ಲಿ ರಾಮನಗರವನ್ನು ಸೋಲಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT