ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಳಿತಾಯ ಮನೋಭಾವವಿಲ್ಲದೇ ಸಂಕಷ್ಟಕ್ಕೆ’

Last Updated 14 ಡಿಸೆಂಬರ್ 2013, 4:57 IST
ಅಕ್ಷರ ಗಾತ್ರ

ಅಕ್ಕಿಆಲೂರ: ಇಲ್ಲಿಯ ಸಿ.ಎಂ.ಉದಾಸಿ ಮುಖ್ಯ ರಸ್ತೆಯಲ್ಲಿನ ಚಂದ್ರಶೇಖರ ವಾಣಿಜ್ಯ ಸಂಕೀರ್ಣದಲ್ಲಿ ಎಲ್.ಐ.ಸಿ. ಗ್ರಾಹಕರ ಸೇವಾ ಕೇಂದ್ರವನ್ನು ಬುಧವಾರ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸ್ವಾಮೀಜಿ, ಬಡ ಮತ್ತು ಮಧ್ಯಮ ಕುಟುಂಬಕ್ಕೆ ಸೇರಿದ ಜನತೆ ತಮ್ಮ ದುಡಿಮೆಯ ಹಣವನ್ನೆಲ್ಲ ವ್ಯಯ ಮಾಡುತ್ತಿರುವ ಪರಿಣಾಮ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಭವಿಷ್ಯದ ಬದುಕಿನ ಚಿಂತೆ ಇಲ್ಲದೇ ದುಂದುವೆಚ್ಚ ಮಾಡುತ್ತಿರುವುದರಿಂದ ಇಂದು ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ವಿಷಾದಿಸಿದ ಅವರು ಉಳಿತಾಯ ಮನೋಭಾವ ಪ್ರತಿಯೊಬ್ಬರಲ್ಲಿಯೂ ಜಾಗೃತಗೊಳ್ಳಬೇಕಿದೆ. ಎಲ್.ಐ.ಸಿ. ಆರಂಭಿಸಿರುವ ಉಳಿತಾಯ ಯೋಜನೆಗಳಲ್ಲಿ ಹಣ ವಿನಿಯೋಗಿಸಿ ಭವಿಷ್ಯದ ಬದುಕಿಗೆ ಹಣ ಕೂಡಿಡುವ ನಿಟ್ಟಿನಲ್ಲಿ ಗಮನ ನೀಡುವಂತೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿ, ಎಲ್.ಐ.ಸಿ. ಅಭಿವೃದ್ಧಿ ಅಧಿಕಾರಿ ಪಿ.ಎಸ್.ಸಾಂಬ್ರಾಣಿ ಮಾತನಾಡಿ, ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡುವ ಉದ್ದೇಶದಿಂದ ಸೇವಾ ಕೇಂದ್ರ ಆರಂಭಿಸಲಾಗುತ್ತಿದೆ. ವಿಮಾ ಕಂತು ಹಣವನ್ನು ಕೇಂದ್ರದಲ್ಲಿ ಸ್ವೀಕರಿಸುವ ಜೊತೆಗೆ ಉಪಯುಕ್ತ ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದರು.

ಸಿದ್ದಲಿಂಗೇಶ ಸಿಂಧೂರ, ರವಿ ಕೋರಿಶೆಟ್ಟರ, ಈಶ್ವರ ಕೋರಿಶೆಟ್ಟರ, ಮಹೇಶ ಕೋರಿಶೆಟ್ಟರ, ಸಿದ್ಧಲಿಂಗೇಶ ತುಪ್ಪದ, ಮಹೇಶ ಸಾಲವಟಗಿ, ಮೃತ್ಯುಂಜಯ ದುರ್ಗದ, ಮುತ್ತಪ್ಪ ಮುಚ್ಚಂಡಿ, ರಾಜೂ ಗಣಾಚಾರಿ, ರುದ್ರಾಕ್ಷಿ ಮಠಪತಿ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT