ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗಾಗಿ ಪ್ರತಿಭಟನೆ

Last Updated 18 ಮಾರ್ಚ್ 2017, 6:04 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾಗಿರುವ ನಗರಸಭೆಯ ವಿರುದ್ಧ ನಗರದ ದೊಡ್ಡಪೇಟೆಯ ರೊಡ್ಡನವರ ಓಣಿ ಸೇರಿದಂತೆ ವಿವಿಧ ವಾರ್ಡ್‌ಗಳ ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲಿ ಶುಕ್ರವಾರ ಖಾಲಿ ಸಿಂಟೆಕ್ಸ್‌, ಪ್ಲಾಸ್ಟಿಕ್‌ ಕೊಡಪಾನಗಳನಿಟ್ಟು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಯಲಕ್ಷ್ಮೀ ಕೋರಿಶೆಟ್ಟರ ಮಾತನಾಡಿ,  ಕಳೆದ 20 ಕ್ಕೂ ಹೆಚ್ಚು ದಿನಗಳಿಂದ ನಗರಸಭೆಯ ಅಧಿಕಾರಿಗಳು ನಮ್ಮ ಓಣಿಯ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವಲ್ಲಿ ತಾರತಮ್ಯವೆಸ ಗಿದ್ದಾರೆ. ಅಧಿಕಾರಿಗಳ ಈ ವರ್ತನೆ ಯಿಂದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಕೈಯಲ್ಲಿ ಖಾಲಿ ಕೂಡಗಳನ್ನು ಹಿಡಿದು ಸುಡು ಬಿಸಿಲು ಲೆಕ್ಕಿಸದೇ ವಾರ್ಡ್‌ಗಳಲ್ಲಿ ಅಲೆದಾಡುವಂತಾಗಿದೆ ಎಂದು ದೂರಿದರು.

ಇಲ್ಲಿನ ಬಡವರು ಮತ್ತು ರೈತರು ತಮ್ಮ ದನ-ಕರುಗಳಿಗೆ ನೀರು ತರಲು  ಹರಸಾಹಸಪಡುತ್ತಿದ್ದಾರೆ. ಬೇಸಿಗೆ ಪ್ರಾರಂಭಕ್ಕೂ ಮುನ್ನ ಅಧಿಕಾರಿಗಳು  ಮುಂಜಾಗ್ರತಾ ಕ್ರಮವನ್ನು ಕೈಗೂಳ್ಳುವಲ್ಲಿ ಸಂಪೂರ್ಣ ವಿಫಲವಾಗಿದ್ದರಿಂದ

ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ನೀರಿನ ಸಮಸ್ಯೆ ನಿವಾರಣೆಗಾಗಿ ತಕ್ಷಣ ಕೊಳವೆಬಾವಿ ಕೊರೆಸಿ ಕುಡಿಯುವ ನೀರು ಪೂರೈಸಬೇಕೆಂದು ಒತ್ತಾಯಿಸಿದರು.

ನೀಲಮ್ಮ ರೊಡ್ಡನವರ ಮಾತನಾಡಿ, ನಗರಸಭೆಯು ನಗರದ ಜನರಿಗೆ ಸರ್ಮಪಕವಾಗಿ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತಿಲ್ಲ. ಸ್ವಚ್ಛತೆಗಾಗಿ ನಿತ್ಯ ಲಕ್ಷಾಂತರ ರೂಪಾಯಿ ಹಣವನ್ನು ನೀರಿನ ಹಾಗೆ ಖರ್ಚು ಮಾಡುತ್ತಿದ್ದರೂ ಯಾವುದೇ ರೀತಿಯ ಪರಿಣಾಮ ಕಂಡು ಬರುತ್ತಿಲ್ಲ ಎಂದು ದೂರಿದರು.     

ಪ್ರತಿಭಟನೆಯ ಸುದ್ದಿ ತಿಳಿಯುತ್ತಿ ದ್ದಂತೆಯೇ ನಗರಸಭೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಂ.ಆರ್. ಗಿರಡ್ಡಿ ಘಟನಾ ಸ್ಥಳಕ್ಕೆ ಬಂದು ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಶ್ರಮಿಸುತ್ತಿದ್ದೇವೆ. ಹ್ಯಾಂಡ್‌ ಪಂಪ್‌ ದುರಸ್ತಿ, ಹೊಸ ಕೊಳವೆಬಾವಿ ಹಾಕಿಸುವುದು, ಟ್ಯಾಂಕರ್‌ ಮೂಲಕ ನೀರು ಪೂರೈಕೆ ಸೇರಿದಂತೆ ಸಮರೋಪಾದಿಯಲ್ಲಿ ನಗರಸಭೆ ಸಿಬ್ಬಂದಿ ಕೆಲಸ ಮಾಡುತ್ತಿದೆ. ಖಾಸಗಿ ಕೊಳವೆ ಬಾವಿ ಅವರಿಗೂ ನೀರು ಪೂರೈಸಲು ನಗರಸಭೆಯಿಂದ ಮನವಿ ಮಾಡಲಾಗಿದೆ. ತುಂಗಭದ್ರಾ ನದಿಯು ಸಂಪೂರ್ಣ ಬರಿದಾಗಿದೆ. ಜನತೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. 

ರೊಡ್ಡನವರ ಓಣಿಗೆ ಎರಡು ದಿನಗಳಲ್ಲಿ ಕೊಳವೆ ಬಾವಿ ಕೊರೆಸಿ ಮೋಟಾರ್‌ ಅಳವಡಿಸಲು ನಿರ್ಧರಿಸಿ ದ್ದೇವೆ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆಯಿಂದ ವಾಪಸ್ಸು ತೆರಳಿದರು.

ಹಂಪಕ್ಕ ರೊಡ್ಡನವರ, ಬಸಮ್ಮ ರೊಡ್ಡನವರ, ಶಿವಯೋಗಿ ರೊಡ್ಡನವರ, ನೀಲಮ್ಮ ಭತ್ತದ, ಅನಿಲ ಸಿದ್ದಾಳಿ, ಶರತ್‌ ರೊಡ್ಡನರ, ರಾಜಶೇಖರ ಕೋರಿಶೆಟ್ಟರ್‌, ಸುಮಾ ರೊಡ್ಡನವರ, ನೇತ್ರಾವತಿ ಕೊರಿ, ಸೋಮಕ್ಕ ರೊಡ್ಡನವರ, ಜಯಲಕ್ಷ್ಮೀ ಭಾಗ್ಯ ಹಿರೇತನವರ, ಪಾಪಮ್ಮ ಬಳ್ಳಾರಿ, ವೀರಮ್ಮ ಬಳ್ಳಾರಿ, ಭಾಗ್ಯಮ್ಮ ಶಿರಗೇರಿ, ಆಶಾ ತಡಕನಹಳ್ಳಿ, ಹಂಪಕ್ಕರೊಡ್ಡನವರ, ಪಂಚಯ್ಯ ನೀರಲಗಿಮಠ, ಸುನೀಲ ಸಿದ್ದಾಳಿ, ಸಿದ್ದು ಚಿಕ್ಕಬಿದರಿ ಇದ್ದರು.

**

ಎರಡು ದಿನಗಳಲ್ಲಿ ನೀರು ಪೂರೈಕೆ

ತುಂಗಭದ್ರಾ ನದಿ ನೀರು ಸಂಪೂರ್ಣ ಬತ್ತಿದೆ. ನೀರು ಪೂರೈಕೆಯಲ್ಲಿ ತೊಂದರೆಯಾಗಿದೆ. ಕೆಲ ಕಡೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ನಗರದಲ್ಲಿ ಒಟ್ಟು 52 ಹ್ಯಾಂಡ್‌ಪಂಪ್‌ಗಳು, 75 ಕೊಳವೆ ಬಾವಿಗಳಿವೆ. ಕೆಲ ಕಡೆ ಅಂತರ್ಜಲ ಕಡಿಮೆಯಾಗಿ ನೀರು ಹೋಗಿವೆ.

ಈಗಾಗಲೇ 10 ಕಡೆ ಹೊಸ್‌ ಕೊಳವೆ ಬಾವಿ ಹಾಕಿಸಲಾಗಿದ್ದು, ವಿದ್ಯುತ್‌ ಸೌಲಭ್ಯ, ಪಂಪ್‌ಸೆಟ್‌ ಅಳವಡಿಸಲಾಗುತ್ತಿದೆ. ರೊಡ್ಡನವರ ಓಣಿಗೆ ತಜ್ಞರಿಂದ ಪಾಯಿಂಟ್‌ ತೋರಿಸಿ ಎರಡು ದಿನಗಳಲ್ಲಿ ಕೊಳವೆ ಬಾವಿಗೆ ಹಾಕಿಸಿ ನೀರು ಪೂರೈಸಲಾಗುವುದು ಎಂದು ರಾಣೆಬೆನ್ನೂರು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಆರ್‌. ಗಿರಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT