ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರಂಗ ಮಂದಿರ ಭವಿಷ್ಯದ ಕಲಾವಿದರಿಗೆ ಅನುಕೂಲ'

Last Updated 26 ಡಿಸೆಂಬರ್ 2012, 9:33 IST
ಅಕ್ಷರ ಗಾತ್ರ

ಹಾನಗಲ್: `ಸುಸಜ್ಜಿತ ಬಯಲು ರಂಗ ಮಂದಿರದ ನಿರ್ಮಾಣದಿಂದ ಹಾನಗಲ್ ಭಾಗದ ಕಲಾವಿದರು ಭವಿಷ್ಯದಲ್ಲಿ ದಾಖಲೆ ಪ್ರಮಾಣದ ಸಾಧನೆ ಗೈಯುವ ವಿಶ್ವಾಸವಿದೆ' ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಭರವಸೆ ವ್ಯಕ್ತಪಡಿಸಿದರು.

ಹಾನಗಲ್ಲಿನಲ್ಲಿ ಲೋಕೋಪಯೋಗಿ ಇಲಾಖೆ ರೂ 1.5 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕುಮಾರೇಶ್ವರ ಬಯಲು ರಂಗಮಂದಿರವನ್ನು ಮಂಗಳವಾರ  ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.

ಸುಸಜ್ಜಿತ ರಂಗ ಮಂದಿರಗಳನ್ನು ನಿರ್ಮಾಣ ಮಾಡುವ ಮೂಲಕ ಸರ್ಕಾರ  ಕಲಾವಿದರಿಗೆ ಪ್ರೋತ್ಸಾಹ ನೀಡುವಲ್ಲಿ ತೊಡಗಿದ್ದರಿಂದ ಹಾನಗಲ್ ಲಿಂ. ಕುಮಾರ ಶಿವಯೋಗಿಗಳ ಉದ್ದೇಶ ಈಡೇರಿದಂತಾಗಿದೆ ಎಂದ ಅವರು, ಕಲೆ, ಸಾಹಿತ್ಯಗಳ ಸೊಬಗು ಈ ರಂಗಮಂದಿರದಿಂದ ಮತ್ತಷ್ಟು ಇಮ್ಮಡಿಗೊಳ್ಳಲಿದೆ ಎಂದರು.

ಇದಕ್ಕೂ ಮುನ್ನ ಲೋಕೋಪಯೋಗಿ ಇಲಾಖೆಯಿಂದ ರೂ 3 ಕೋಟಿ  ವೆಚ್ಚದಲ್ಲಿ ನಿರ್ಮಾಣಗೊಂಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿಬ್ಬಂದಿಗಳ 12 ವಸತಿ ಗೃಹಗಳು, ರೂ 2.20 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಹಾನಗಲ್‌ಸುರಳೇಶ್ವರ ಕಾಂಕ್ರೀಟ್ ರಸ್ತೆ, ಇದೇ ರಸ್ತೆಗೆ ರೂ 82 ಲಕ್ಷ ವೆಚ್ಚದ ಸೇತುವೆ ನಿರ್ಮಾಣ, 52 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ವಿರಕ್ತಮಠದ ಎದುರಿನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದರಲ್ಲದೇ, ಭಾರತೀಯ ಸ್ಟೇಟ್ ಬ್ಯಾಂಕ್ ಎದುರಿನಲ್ಲಿನ ರೂ 85 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಾಂಕ್ರೀಟ್ ರಸ್ತೆ, ತಾಲ್ಲೂಕು ಕ್ರೀಡಾಂಗಣದಲ್ಲಿ ರೂ 1.77 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಈಜುಗೊಳ ಕಾಮಗಾರಿ, ರೂ 1.65 ಲಕ್ಷ ವೆಚ್ಚದ ಹಾನಗಲ್-ಮಂತಗಿ ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವ ಉದಾಸಿ ಶಿಲಾನ್ಯಾಸ ನೆರವೇರಿಸಿದರು.

ಜಿ.ಪಂ.ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಸದಸ್ಯ ಪದ್ಮನಾಭ ಕುಂದಾಪುರ, ತಾ.ಪಂ .ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷೆ ಅನಿತಾ ಶಿವೂರ್, ಪುರಸಭೆ ಅಧ್ಯಕ್ಷೆ ಹಸೀನಾಬಿ ನಾಯ್ಕನವರ, ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್.ಬಳ್ಳಾರಿ, ಎಪಿಎಂಸಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ, ಆಶ್ರಯ ಸಮಿತಿ ಅಧ್ಯಕ್ಷ ಸುರೇಶ ರಾಯ್ಕರ, ತಹಸೀಲ್ದಾರ್ ರಮೇಶ ಕೊನರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಕುಂತಲಾ ಪವಾಡಿ, ಮಾಜಿ ಪುರಸಭೆ ಅಧ್ಯಕ್ಷರುಗಳಾದ ಹನುಮಂತಪ್ಪ ನಾಗಜ್ಜನವರ, ಕಲ್ಯಾಣಕುಮಾರ ಶೆಟ್ಟರ, ಲಕ್ಷ್ಮವ್ವ ಹಳೇಕೋಟಿ, ಜಯಶ್ರೀ ಚನ್ನಗೌಡರ, ನಿಂಗಪ್ಪ ಗೊಬ್ಬೇರ, ಬಸಣ್ಣ ಸೂರಗೊಂಡರ, ರಾಜಣ್ಣ ಗೌಳಿ, ಸದಾಶಿವ ಉದಾಸಿ, ಪಿ.ವೈ. ಗುಡಗುಡಿ, ಗಣೇಶ ಮೂಡ್ಲಿ, ಎನ್.ಜಿ.ಕುಂಬಾರಿ, ರವಿರಾಜ ಕಲಾಲ, ಪಿ.ಬಿ. ಹಾವೇರಿ, ಚಂದ್ರು ಉಗ್ರಣ್ಣನವರ ಸಮಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT