ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರಿನಲ್ಲಿ ಹೆಚ್ಚಿದ ಹಂದಿಗಳ ಹಾವಳಿ

Last Updated 24 ಏಪ್ರಿಲ್ 2017, 5:36 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇಲ್ಲಿನ ನಗರಸಭೆ ಸ್ವಚ್ಛ ತೆಯಲ್ಲಿ ರಾಜ್ಯದಲ್ಲಿ 11 ನೇ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರೂ, ಹಂದಿಗಳ ಹಾವಳಿ ಮಾತ್ರ ತಗ್ಗಿಲ್ಲ. ಹಂದಿಗಳೊಂದಿಗೆ ಬಿಡಾಡಿ ದನಗಳೂ ಸಾರ್ವಜನಿಕರ ಓಡಾಟವನ್ನು ದುರಸ್ತಗೊಳಿಸಿವೆ.ರಸ್ತೆಗಳ ಪಕ್ಕದಲ್ಲಿ ಕಸದ ಗುಡ್ಡೆಗಳು, ಸರ್ಕಾರಿ ಇಲಾಖೆಗಳ ಕಾಂಪೌಂಡ್‌ಗಳನ್ನು ವಾಸಸ್ಥಾನವಾಗಿಸಿಕೊಂಡಿರುವ ಹಂದಿಗಳು, ನಗರಸಭೆ ಕರ್ಮಚಾರಿಗಳು ಸಂಗ್ರಹಿಸಿ ಗುಡ್ಡೆಹಾಕಿದ ಕಸವನ್ನು ಮತ್ತೆ ರಸ್ತೆಯ ತುಂಬೆಲ್ಲ ಚೆಲ್ಲಾಡಿ ಗಲೀಜು ಮಾಡುತ್ತಿವೆ.

‘ನಗರದ ಸ್ವಚ್ಛತೆಗೆ ಭಂಗ ತರುತ್ತಿರುವ ಈ ಹಂದಿಗಳನ್ನು ನಿಯಂತ್ರಿಸಬೇಕು. ಅವುಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ನಾಗರಿಕರು ಆಗ್ರಹಿಸುತ್ತಾರೆ.ಈ ಹಿಂದೆ ಹಂದಿ ಜ್ವರ ಕಾಣಿಸಿಕೊಂಡಾಗ ಗಲೀಜು ನಿರ್ಮಾಣಕ್ಕೆ ಕಾರಣವಾದ ಹಂದಿಗಳನ್ನು ಊರಿನಿಂದ ಬೇರೆಡೆ ಸಾಗಿಸಲು ಜಿಲ್ಲಾಡಳಿತವು ನಗರಸಭೆಗೆ ನಿರ್ದೇಶನ ನೀಡಿತ್ತು. ಆಗ ಜಿಲ್ಲಾಧಿಕಾರಿಗಳ ಆದೇಶ ಪಾಲಿಸಲು ನೂರಾರು ಹಂದಿಗಳನ್ನುಹಿಡಿದು ಊರ ಹೊರ ವಲಯಕ್ಕೆ ಸಾಗಿಸಲಾಗಿತ್ತು. ನಂತರ ಮತ್ತೆ ಹಳೆಯ ಪರಿಸ್ಥಿತಿ ಮುಂದುವರಿದಿದೆ.

ಹಂದಿಗಳ ಸಂಖ್ಯೆ ಹೆಚ್ಚಳ: ‘ಹಂದಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಗರ ಸಭೆ ವಿಫಲವಾಗಿದೆ. ಇದರಿಂದ ನಗರದ ಜನಸಂಖ್ಯೆಗೆ ಸರಿಸಮಾನಾಗಿ ಹಂದಿಗಳ ಸಂಖ್ಯೆ ಬೆಳೆಯುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸಿದ ನಗರಸಭೆ ಸದಸ್ಯರೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.

ಜಾಗದ ಸಮಸ್ಯೆ: ‘ಹಂದಿಗಳನ್ನು ಸಾಕುವ ವರು ಪರವಾನಗಿ ಪಡೆಯೋದಿಲ್ಲ. ಹಂದಿ ಸಾಕಿ ಆರ್ಥಿಕವಾಗಿ ಸಾಕಷ್ಟು ಪ್ರಬಲರಾಗಿ ದ್ದರೂ, ಹಂದಿಗಳನ್ನು ಹೊರಗಡೆ ಸಾಕಿ ಎಂದು ಸೂಚಿಸಿದರೆ  ಹತ್ತಾರು ಎಕರೆ ಜಾಗ ಕೇಳುತ್ತಾರೆ. ಅವರು ಕೇಳುವ ಎಕರೆಗಟ್ಟಲೇ ಜಾಗ ಎಲ್ಲಿಂದ ಕೊಡ ಬೇಕು’ ಎಂದು ನಗರಸಭೆ ಸಿಬ್ಬಂದಿ ಯೊಬ್ಬರು ಪ್ರಶ್ನಿಸಿತ್ತಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT