‘ಹೆತ್ತವರನ್ನು ಗೌರವದಿಂದ ಕಾಣಿ’

7

‘ಹೆತ್ತವರನ್ನು ಗೌರವದಿಂದ ಕಾಣಿ’

Published:
Updated:
Deccan Herald

ಚನ್ನಪಟ್ಟಣ: ಇಳಿವಯಸ್ಸಿನಲ್ಲಿ ಪೋಷಕರನ್ನು ಕಡೆಗಣಿಸುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಮಾಜ ಕಲುಷಿತಗೊಳ್ಳುತ್ತಿದೆ ಎಂದು ಅರ್ಚಕರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಮುಖ್ಯಸ್ಥರಾದ ಅನ್ನದಾನೇಶ್ವರ ಸ್ವಾಮೀಜಿ ವಿಷಾದಿಸಿದರು.

ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ನಂದಿ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ತಂದೆ ತಾಯಿಯನ್ನು ಗೌರವದಿಂದ ಕಾಣುವ, ಅವರನ್ನು ಮಕ್ಕಳಂತೆ ನೋಡಿಕೊಳ್ಳುವ ಮನೋಭಾವ ಪ್ರತಿಯೊಬ್ಬ ಮಕ್ಕಳಲ್ಲೂ ಬೆಳೆಯಬೇಕು. ಅವರನ್ನು ಆರೈಕೆ ಮಾಡುವುದು ಎಲ್ಲರ ಆದ್ಯ ಕರ್ತವ್ಯ ಎಂದರು.

ನೂತನವಾಗಿ ಪ್ರಾರಂಭವಾಗಿರುವ ಟ್ರಸ್ಟ್ ನಿರಂತರವಾಗಿ ಸಮಾಜ ಸೇವಾ ಚಟುವಟಿಕೆಯಲ್ಲಿ ಭಾಗಿಯಾಗಲಿ. ಅಬಲರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಹಾಗೂ ಸಮಾಜದಲ್ಲಿ ಶೋಷಣೆಗೊಳಗಾದವರಿಗೆ ಆಸರೆಯಾಗಿ ನಿಲ್ಲುವುದರ ಮುಖಾಂತರ ಇತರಿಗೆ ಮಾದರಿಯಾಗಲಿ ಎಂದು ಶುಭ ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಜಯಮುದ್ದಪ್ಪ ಮಾತನಾಡಿ, ‘ನಂದಿ’ ಹೆಸರಿನಲ್ಲಿ ಜನ್ಮ ಪಡೆಯುತ್ತಿರುವ ಟ್ರಸ್ಟ್ ಮುಂದಿನ ದಿನಗಳಲ್ಲಿ ಜನಪದ ಕಾರ್ಯ ಮಾಡುವುದರ ಮುಖಾಂತರ ಸಮಾಜದಲ್ಲಿ ಗುರುತಿಸಿಕೊಳ್ಳಲಿದೆ ಎಂದು ತಿಳಿಸಿದರು.

ಟ್ರಸ್ಟ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಆಂಗ್ಲ ನಿಘಂಟು, 500 ಉಚಿತ ಸಸಿಗಳು, ಹಿರಿಯ ನಾಗರಿಕರಿಗೆ ಕಂಬಳಿ ಹಾಗೂ ವಾಕಿಂಗ್ ಸ್ಟಿಕ್ ನೀಡಲಾಯಿತು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ದಿನೇಶ್, ಪದಾಧಿಕಾರಿಗಳಾದ ಶ್ರೀನಿವಾಸ್, ಮಮತಾ, ಅಶೋಕ್, ಬಿ.ಎಸ್. ಚೇತನ್, ಪಿ.ಸುರೇಶ್, ಬಿ.ಟಿ. ಚಿಕ್ಕಪುಟ್ಟೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !