ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಕೋಟ ಸ್ವಾತಂತ್ರ್ಯ ದಿನಾಚರಣೆ: ವಿವಿಧತೆಯಲ್ಲಿ ಏಕತೆ; ಸಾಧನೆ

Last Updated 15 ಆಗಸ್ಟ್ 2019, 12:22 IST
ಅಕ್ಷರ ಗಾತ್ರ

ತಿಕೋಟಾ: ‘ಅಹಿಂಸೆಯಿಂದ ಸ್ವಾತಂತ್ರ್ಯವನ್ನು ಪಡೆದ ವೀರ ಪರಂಪರೆ ನಮ್ಮದು. ವಿವಿಧತೆಯಲ್ಲಿ ಏಕತೆ ಸಾಧಿಸಿದ ಕೆಲವೇ ದೇಶಗಳಲ್ಲಿ ಭಾರತ ಅಗ್ರಮಾನ್ಯ ಸ್ಥಾನದಲ್ಲಿದೆ’ ಎಂದು ತಹಶೀಲ್ದಾರ್ ಸಂತೋಷ ಮ್ಯಾಗೇರಿ ಹೇಳಿದರು.

ಪಟ್ಟಣದ ವಾಡೆ ಆವರಣದಲ್ಲಿ ಗುರುವಾರ 73ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪ್ರಭಾವತಿ ನಾಟೀಕಾರ ಮಾತನಾಡಿದರು.

ಗ್ರೇಡ್‌–2 ತಹಶೀಲ್ದಾರ್ ಎಸ್.ಎಸ್.ಅರಕೇರಿ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಮಾಜಿ ಸೈನಿಕ ಸಂಗಯ್ಯ ಮಠಪತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಕನ್ನಡ ಹೆಣ್ಣು ಮಕ್ಕಳ ಶಾಲೆ, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿಶಾಲೆ, ಪ್ರೌಢಶಾಲಾ ವಿಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿಶಾಲೆ, ಡಾ.ಬಿ. ಆರ್.ಅಂಬೇಡ್ಕರ್ ಶಾಲೆ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಫರನಾಕರ್, ಸಿದ್ದಯ್ಯ ಗದಗಿಮಠ, ಬಸಯ್ಯ ವಿಭೂತಿ, ಜಗದೀಶಗೌಡ ಪಾಟೀಲ, ಹಾಜಿಲಾಲ ಬಾಗವಾನ್, ಸುನಿಲ್ ನಾಲಾ, ಎಸ್‌ಡಿಎಂಸಿ ಅಧ್ಯಕ್ಷ ರಾವತ ಕಂಬಾರ ಇದ್ದರು.

ತಾಲ್ಲೂಕು ಆಡಳಿತ: ತಾಲ್ಲೂಕು ಆಡಳಿತ ವತಿಯಿಂದ ಬಬಲೇಶ್ವರ ಪಟ್ಟಣದ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಹಶೀಲ್ದಾರ್ ಎಂ.ಎಸ್.ಅರಕೇರಿ ಧ್ವಜಾರೋಹಣ ನೆರವೇರಿಸಿದರು.

ಶಾಂತವೀರ ಪ್ರೌಢಶಾಲೆ, ಕೆಜಿಎಸ್‌, ಎಂಪಿಎಸ್‌ ಶಾಲೆ ವಿದ್ಯಾರ್ಥಿಗಳಿಂದ ಪಥಸಂಚನ ಜರುಗಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಉಮೇಶ್ ಕೋಳಕೂರ, ತಾಲ್ಲೂಕು ಪಂಚಾಯಿತಿ ಸದಸ್ಯ ಬೀರಪ್ಪ ಸೊಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೌರಮ್ಮ ಬೂದಿಹಾಳ, ಉಪಾಧ್ಯಕ್ಷೆ ನಿವೇದಿತಾ ಮರ್ಯಾಣಿ, ಗ್ರೇಡ್‌–2 ತಹಶೀಲ್ದಾರ್ ಎಸ್‌.ಎಚ್.ಮೇಳಿಗೇರಿ, ಪ್ರಾಚಾರ್ಯ ಎಸ್.ಡಿ.ಗಡದೆ, ಪಿಎಸ್‌ಐ ಸಂಜಯಕುಮಾರ ಕಲ್ಲೂರ ಇದ್ದರು.

ಉಪನ್ಯಾಸಕ ಎಂ.ಬಿ.ರೆಬಿನಾಳ ನಿರೂಪಿಸಿ, ಶಿಕ್ಷಕ ಅಶೋಕ ಬೂದಿಹಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT