ಕೊಡಗು ಸಂತ್ರಸ್ತರಿಗೆ ಸಂಗ್ರಹಿಸಿದ್ದ ಹಣ ಮುಖ್ಯಮಂತ್ರಿ ಸಲ್ಲಿಕೆ

7

ಕೊಡಗು ಸಂತ್ರಸ್ತರಿಗೆ ಸಂಗ್ರಹಿಸಿದ್ದ ಹಣ ಮುಖ್ಯಮಂತ್ರಿ ಸಲ್ಲಿಕೆ

Published:
Updated:
Deccan Herald

ಚನ್ನಪಟ್ಟಣ: ಕಸ್ತೂರಿ ಕರ್ನಾಟಕ ಜನಪರ ವೇದಿಕೆಯು ಕೊಡಗು ಸಂತ್ರಸ್ತರಿಗೆಂದು ಸಂಗ್ರಹಿಸಿದ ₹1.40 ಲಕ್ಷವನ್ನು ಚೆಕ್ ಮೂಲಕ ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಯಿತು.

ವೇದಿಕೆಯ ವತಿಯಿಂದ ಸಾಲುಮರದ ತಿಮ್ಮಕ್ಕ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಅಲ್ಲಿ ರೈತ ಉತ್ಪನ್ನಗಳಾದ ಎಳನೀರು ಮತ್ತು ಕಬ್ಬಿನ ಹಾಲನ್ನು ಮಾರುವ ಮುಖಾಂತರ ಕೊಡಗು ಸಂತ್ರಸ್ತರಿಗೆ ನೆರವಾಗಲು ಹಣ ಸಂಗ್ರಹ ಮಾಡಿತ್ತು. ಇದರ ಜೊತೆಗೆ ಕೆಲವು ಶಾಲೆಗಳು ಸಹ ಕೊಡಗು ನಿರಾಶ್ರಿತರಿಗೆ ಒಂದಷ್ಟು ಸಾಮಗ್ರಿಗಳನ್ನು ನೀಡಿದ್ದರು.

ವೇದಿಕೆಯ ವತಿಯಿಂದ ಪಟ್ಟಣದಲ್ಲಿ ಹೆಬ್ಬೆಟ್ಟು ನಾಟಕ ಪ್ರದರ್ಶನ ಏರ್ಪಡಿಸಿ ₹500 ಪ್ರವೇಶ ಶುಲ್ಕ ನೀಡಿ ಟಿಕೆಟ್ ಖರೀದಿಸಿ ನಾಟಕ ವೀಕ್ಷಿಸಿದ್ದ ತಾಲ್ಲೂಕಿನ ಜನರು ಈ ಮೂಲಕ ವೇದಿಕೆಯ ಕಾರ್ಯಕ್ಕೆ ನೆರವಾಗಿದ್ದರು.

ಸಂಗ್ರಹವಾಗಿದ್ದ ಒಟ್ಟು ₹1.40 ಲಕ್ಷವನ್ನು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಹಾಗೂ ಇತರ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ನೀಡಿ ಚೆಕ್ ಮುಖಾಂತರ ನೀಡಿದರು.

ಕನ್ನಡಪರ ಹೋರಾಟಗಳ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳ ಮೇಲೆ ದಾಖಲಿಸಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಮನವಿಪತ್ರ ನೀಡಲಾಯಿತು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಗೌಡ, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಉಮಾಶಂಕರ್, ಯುವ ಘಟಕದ ರಂಜಿತ್ ಗೌಡ, ರವಿ ಮಳೂರುಪಟ್ಟಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !