ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,500ಟನ್ ಯೂರಿಯಾ ಪೂರೈಕೆ

Last Updated 12 ಜೂನ್ 2022, 5:53 IST
ಅಕ್ಷರ ಗಾತ್ರ

ಕಲಬುರಗಿ: ಮುಂಗಾರು ಹಂಗಾಮಿಗೆ ಬೇಕಾಗುವ ಅಗತ್ಯ ರಸಗೊಬ್ಬರ ಪೂರೈಕೆ ಬೇಡಿಕೆ ಬೆನ್ನಲ್ಲೇ ಶನಿವಾರ ನಗರಕ್ಕೆ 2,500 ಟನ್‌ ಯೂರಿಯಾ ಸರಬರಾಜು ಆಗಿದೆ.

ಇಲ್ಲಿನ ತಾಜ್‌ಸುಲ್ತಾನಪುರದ ರೈಲು ನಿಲ್ದಾಣಕ್ಕೆ ಸರಕುಸಾಗಣೆ ಬೋಗಿಗಳಲ್ಲಿ ಬಂದ‌ ಯೂರಿಯಾ ಗೊಬ್ಬರವನ್ನು ಕೂಲಿಕಾರ್ಮಿಕರು ಇಳಿಸಿಕೊಂಡು ಲಾರಿಯಲ್ಲಿ ತುಂಬಿದರು. ಬಳಿಕ ಕಲಬುರಗಿಯ ತಾಲ್ಲೂಕು ಕೇಂದ್ರಗಳು, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಸಾಗಿಸಲಾಯಿತು.

‘ಕೇಂದ್ರ ಕಚೇರಿಯಿಂದ ಹಂಚಿಕೆಯಾದ 2,500 ಟನ್ ಯೂರಿಯಾ ರಸಗೊಬ್ಬರ ಶನಿವಾರ ಇಳಿಸಿಕೊಳ್ಳಲಾಗಿದೆ. ಇದರಲ್ಲಿ ಕಲಬುರಗಿ ಜಿಲ್ಲೆಗೆ 1,600 ಟನ್ ಪೂರೈಕೆಯಾಗಲಿದೆ. ಉಳಿದ ಪ್ರಮಾಣ ಬೀದರ್‌ ಮತ್ತು ಯಾದಗಿರಿಗೆ ಹಂಚಿಕೆ ಯಾಗಲಿದೆ’ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸೂಗುರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಮವಾರ ಅಥವಾ ಮಂಗಳವಾರ 6,500 ಟನ್ ಡಿಎಪಿ ಗೊಬ್ಬರ ಕಲಬುರಗಿಗೆ ಬರುವ ಸಾಧ್ಯತೆ ಇದೆ. ಜೂನ್‌ ತಿಂಗಳಲ್ಲಿ 10 ಸಾವಿರ ಟನ್‌ ಹಂಚಿಕೆಯಾಗಿದೆ. ರಸಗೊಬ್ಬರ ಬೇಡಿಕೆಯನ್ನು ಇಷ್ಟೇ ಇರುತ್ತದೆ ಎಂದು ತೀರ್ಮಾನಿಸಲು ಆಗುವುದಿಲ್ಲ. ಸ್ವಲ್ಪ ವ್ಯತ್ಯಾಸ ಆಗಬಹುದು. ರೈತರಿಗೆ ಅಗತ್ಯ ರಸಗೊಬ್ಬರ ಸಕಾಲದಲ್ಲಿ ಸರಬ ರಾಜು ಆಗಲಿದೆ’ ಎಂದು ಹೇಳಿದರು.

‘ಈ ವರ್ಷ ಈವರೆಗೆ 12 ಸಾವಿರ ಟನ್ ಡಿಎಪಿ ಗೊಬ್ಬರ ಬಂದಿದೆ. ಎಲ್ಲ ಕಡೆಗೂ ಹಂಚಿಕೆ ಸಹ ಮಾಡಿದ್ದೇವೆ. ಕಳೆದ ವರ್ಷದ ಮುಂಗಾರು ಹಂಗಾಮಿಗೆ 25 ಸಾವಿರ ಟನ್ ಡಿಎಪಿ ಗೊಬ್ಬರ ಮಾರಾಟ ಆಗಿತ್ತು. ಈ ವರ್ಷ ಅದು 27,000 ಟನ್‌ಗೆ ತಲುಪಬಹುದು. ಮೂಟೆ ಗೊಬ್ಬರಕ್ಕೆ ₹740 ಇದ್ದಾಗ 35 ಸಾವಿರ ಟನ್ ಮಾರಾಟ ಆಗಿತ್ತು’ ಎಂದು ಅವರು ವಿವರಿಸಿದರು.

‘ದರ ಹೆಚ್ಚಾದಂತೆ ಬೇಡಿಕೆ ಕಡಿಮೆಯಾಗಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ, ಈ ವರ್ಷ 27 ಸಾವಿರ ಟನ್ ಸಾಕಾಗಬಹುದು ಎಂಬುದು ನಮ್ಮ ಅಂದಾಜು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT