ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: ಒಂದೇ ಕುಟುಂಬದ ಮೂವರು ಸಾವು

Last Updated 17 ಫೆಬ್ರುವರಿ 2022, 8:22 IST
ಅಕ್ಷರ ಗಾತ್ರ

ಅಫಜಲಪುರ: ಕಬ್ಬಿನ ಟ್ರ್ಯಾಕ್ಟರ್‌ಗೆ ದ್ವಿಚಕ್ರ ವಾಹನ ಡಿಕ್ಕಿಯಾದ ಪರಿಣಾಮ ತಾಲ್ಲೂಕಿನ ಅರ್ಜುಣಗಿ ತಾಂಡಾದ ಧೋಂಡಿರಾಮ್ ಜಾಧವ್ (45) ಪತ್ನಿ ಸಂಗೀತಾ ಜಾಧವ್ (38) ಹಾಗೂ ಮಗ ಅಭಿಷೇಕ ಜಾಧವ್ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ದುಧನಿ ಹಾಗೂ ತಾಲ್ಲೂಕಿನ ಅರ್ಜುಣಗಿ ಗ್ರಾಮದ ಮಧ್ಯೆ ಈ ದುರ್ಘಟನೆ ನಡೆದಿದೆ.

ಧೋಂಡಿರಾಮ ಹಾಗೂ ಪತ್ನಿ ಸಂಗೀತಾ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಹೋಗಿ ಮರಳಿ ಮನೆಗೆ ಬರುವಾಗ ಈ ಅಪಘಾತ ಸಂಭವಿಸಿದೆ.

ಮಂಗಳವಾರ ರಾತ್ರಿ ತಡವಾಗಿ ದುಧನಿ ಪಟ್ಟಣದಿಂದ ಅರ್ಜುಣಗಿ ತಾಂಡಾಕ್ಕೆ ಬರಲು ಯಾವುದೇ ವಾಹನ ಸಿಗದೇ ಇದ್ದಾಗ ಮಗನಿಗೆ ಕರೆ ಮಾಡಿ ದ್ವಿಚಕ್ರ ವಾಹನ ತಂದು ಕರೆದೊಯ್ಯಲು ಹೇಳಿದ್ದರು. ಮೂರು ಜನ ಬೈಕ್ ಮೇಲೆ ಬರುವಾಗ ಅಪಘಾತ ಸಂಭವಿಸಿದೆ.

ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರಿಂದ 11 ವರ್ಷದ ಮಗಳು, 9 ವರ್ಷದ ಮಗ ಅನಾಥರಾಗಿದ್ದಾರೆ. ಅಕ್ಕಲಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT