ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Accidents

ADVERTISEMENT

ನೆಟ್ಟಣ: ಭೀಕರ ಅಪಘಾತ–ನಾಲ್ವರು ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ನೆಟ್ಟಣ ಸಮೀಪ ತೂಫಾನ್‌ ವಾಹನ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದು ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
Last Updated 18 ಏಪ್ರಿಲ್ 2023, 12:02 IST
ನೆಟ್ಟಣ: ಭೀಕರ ಅಪಘಾತ–ನಾಲ್ವರು ಸಾವು

ನೇಪಾಳದಲ್ಲಿ ಕಾರು ಅಪಘಾತ: ನಾಲ್ವರು ಭಾರತೀಯರ ಸಾವು

‘ನೇಪಾಳದ ಸಿಂಧುಲಿ ಜಿಲ್ಲೆಯ ಬಾಗ್ಮತಿ ಪ್ರಾಂತ್ಯದಲ್ಲಿ ಕಂದಕಕ್ಕೆ ಕಾರೊಂದು ಉರುಳಿಬಿದ್ದ ಪರಿಣಾಮ, ಅದರಲ್ಲಿ ಪ್ರಯಾಣಿಸುತ್ತಿದ್ದ ಐದು ಮಂದಿ ಭಾರತೀಯರ ಪೈಕಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ’ ಎಂದು ಹಿಮಾಲಯನ್‌ ಟೈಮ್ಸ್‌ ಪತ್ರಿಕೆ ಬುಧವಾರ ವರದಿ ಮಾಡಿದೆ.
Last Updated 12 ಏಪ್ರಿಲ್ 2023, 11:20 IST
ನೇಪಾಳದಲ್ಲಿ ಕಾರು ಅಪಘಾತ: ನಾಲ್ವರು ಭಾರತೀಯರ ಸಾವು

ಕ್ಯಾಂಟರ್‌ಗೆ ಬೈಕ್ ಡಿಕ್ಕಿ: ಡೆಲಿವರಿ ಬಾಯ್ ಸಾವು

ಬನಶಂಕರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕ್ಯಾಂಟರ್‌ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಸವಾರ ಗೌತಮ್ (26) ಎಂಬುವವರು ಮೃತ ಪಟ್ಟಿದ್ದಾರೆ. ‘ತ್ಯಾಗರಾಜನಗರದ ಗೌತಮ್ ಆಹಾರ ಡೆಲಿವರಿ ಬಾಯ್ ಆಗಿದ್ದರು. ಭಾನುವಾರ ರಾತ್ರಿ ಸ್ನೇಹಿತ ಕಾರ್ತಿಕ್ ಜತೆ ಬೈಕ್‌ನಲ್ಲಿ ಮನೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಕಾರ್ತಿಕ್ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ’ ಎಂದು ಪೊಲೀಸರು ಹೇಳಿದರು.
Last Updated 20 ಮಾರ್ಚ್ 2023, 20:26 IST
ಕ್ಯಾಂಟರ್‌ಗೆ ಬೈಕ್ ಡಿಕ್ಕಿ: ಡೆಲಿವರಿ ಬಾಯ್ ಸಾವು

ಸಂಚಾರ ದಟ್ಟಣೆಯಿಂದ ರಸ್ತೆ ಅಪಘಾತ ಕಡಿಮೆ: ಎಂ.ಎ. ಸಲೀಂ ಅಭಿಮತ

ನಿಮ್ಹಾನ್ಸ್‌ ಕಾರ್ಯಕ್ರಮದಲ್ಲಿ ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ಅಭಿಮತ
Last Updated 20 ಮಾರ್ಚ್ 2023, 20:25 IST
ಸಂಚಾರ ದಟ್ಟಣೆಯಿಂದ ರಸ್ತೆ ಅಪಘಾತ ಕಡಿಮೆ: ಎಂ.ಎ. ಸಲೀಂ ಅಭಿಮತ

ರಸ್ತೆ ಅಪಘಾತ: ತಲೆ ಗಾಯ ಪ್ರಕರಣ ಹೆಚ್ಚಳ

‘ರಸ್ತೆ ಅಪಘಾತಗಳಿಂದ ಸಂಭವಿಸುತ್ತಿರುವ ತಲೆ ಗಾಯ ಪ್ರಕರಣಗಳು ಹೆಚ್ಚಳವಾಗುತ್ತಿವೆ. 2021ರಲ್ಲಿ ದೇಶದಲ್ಲಿ 1.5 ಲಕ್ಷ ಜನರು ರಸ್ತೆ ಅಪಘಾತದಿಂದ ಮೃತಪಟ್ಟರೆ, ಅವರಲ್ಲಿ 36,647 ಮಂದಿ ಕರ್ನಾಟಕದವರಾಗಿದ್ದಾರೆ’ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ತಿಳಿಸಿದೆ.
Last Updated 19 ಮಾರ್ಚ್ 2023, 20:24 IST
ರಸ್ತೆ ಅಪಘಾತ: ತಲೆ ಗಾಯ ಪ್ರಕರಣ ಹೆಚ್ಚಳ

ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌: ಅಪಘಾತದಲ್ಲಿ ಯುವಕ ಸಾವು

ಇಲ್ಲಿನ ಮಹಾಂತೇಶ ನಗರದ ಲವ್‌ಡೇಲ್‌ ಸ್ಕೂಲ್‌ ಹತ್ತಿರ ಅವೈಜ್ಞಾನಿಕವಾಗಿ ಹಾಕಿದ ಸ್ಪೀಡ್‌ ಬ್ರೇಕರ್‌ನಲ್ಲಿ ಬೈಕ್‌ ಅಪಘಾತಕ್ಕೀಡಾಗಿ, ಯುವಕ ಮೃತಪಟ್ಟಿದ್ದಾನೆ.
Last Updated 19 ಮಾರ್ಚ್ 2023, 15:58 IST
ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌: ಅಪಘಾತದಲ್ಲಿ ಯುವಕ ಸಾವು

ಬೆಳಗಾವಿ| ಬಸ್‌– ಬೈಕ್‌ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿ ಹೊರವಲಯದಲ್ಲಿ ಶನಿವಾರ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್‌ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 18 ಮಾರ್ಚ್ 2023, 15:41 IST
ಬೆಳಗಾವಿ| ಬಸ್‌– ಬೈಕ್‌ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು
ADVERTISEMENT

ದೆಹಲಿಯಲ್ಲಿ ಹಿಟ್ ಅಂಡ್ ರನ್: ಯುವಕ ಸಾವು!

ದೆಹಲಿಯ ವಜೀರಾಬಾದ್ ಮೇಲ್ಸೇತುವೆ ಬಳಿ ಬುಧವಾರ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ 25 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 15 ಮಾರ್ಚ್ 2023, 13:16 IST
ದೆಹಲಿಯಲ್ಲಿ ಹಿಟ್ ಅಂಡ್ ರನ್: ಯುವಕ ಸಾವು!

ಬೈಕ್‌ ಡಿಕ್ಕಿ: ಪಾದಚಾರಿ ಸಾವು

ಶ್ರೀಮಂತ ಕೋಳಿ ಅವರು ‘ಪ್ರಜಾವಾಣಿ’ಯ ಚಿಕ್ಕೋಡಿ ವರದಿಗಾರ ಸುಧಾಕರ ಅವರ ತಂದೆ. ಶ್ರೀಮಂತ ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
Last Updated 2 ಮಾರ್ಚ್ 2023, 2:56 IST
ಬೈಕ್‌ ಡಿಕ್ಕಿ: ಪಾದಚಾರಿ ಸಾವು

ಬೆಂಗಳೂರು: ಆಟೋ ಗುದ್ದಿ ಸಂಚಾರ ಠಾಣೆ ಎಎಸ್‌ಐ ಸಾವು

ಬಸವೇಶ್ವರ ವೃತ್ತದಲ್ಲಿ (ಚಾಲುಕ್ಯ) ಕರ್ತವ್ಯದಲ್ಲಿದ್ದ ವೇಳೆ ಆಟೊವೊಂದು ಗುದ್ದಿ ಗಾಯಗೊಂಡಿದ್ದ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ (ಎಎಸ್‌ಐ) ನಾಗರಾಜ್ (56) ಅವರು ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.
Last Updated 1 ಮಾರ್ಚ್ 2023, 5:11 IST
ಬೆಂಗಳೂರು: ಆಟೋ ಗುದ್ದಿ ಸಂಚಾರ ಠಾಣೆ ಎಎಸ್‌ಐ ಸಾವು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT